ಸಂ.ಕ.ಸಮಾಚಾರ ಬಾಗಲಕೋಟೆ: ಈಗಷ್ಟೇ ಆಯುರ್ವೇದ ವೈದ್ಯಕೀಯ ಪದವಿಯನ್ನು ಪಡೆದು ವೃತ್ತಿಗೆ ಪಾದಾರ್ಪಣೆ ಮಾಡಿದ್ದ ಇಳಕಲ್ಲಿನ ವಿಜಯನಗರ ಬಡಾವಣೆಯ ಡಾ.ಪ್ರಜ್ಞಾ ಕುಲಕರ್ಣಿ(24) ರಕ್ತದೊತ್ತಡ ಕುಸಿತ(ಲೋ ಬಿಪಿ)ದಿಂದ ನಿಧನರಾಗಿದ್ದಾರೆ.
ಪ್ರಜ್ಞಾ ತಂದೆ ಪ್ರಹ್ಲಾದರಾವ್ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ತಾಯಿ ಕೂಡ ಶಿಕ್ಷಕಿಯಾಗಿದ್ದಾರೆ. ಪ್ರಜ್ಞಾಳ ಕಿರಿಯ ಸಹೋದರಿಯೂ ಸಹ ಆಯುರ್ವೇದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇಳಕಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಜ್ಞಾ ಅತೀ ಸಣ್ಣ ವಯಸ್ಸಿನಲ್ಲಿ ಲೋ ಬಿಪಿಯಿಂದ ನಿಧನ ಹೊಂದಿರುವುದು ಆಘಾತ ಮೂಡಿಸಿದೆ.
ಚಿಕ್ಕವಯಸಿನವರಲ್ಲಿ ಹೃದಯಾಘಾತ, ಲೋ ಬಿಪಿಯಂಥ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿರುವ ಹೊತ್ತಿನಲ್ಲಿ ಪ್ರಜ್ಞಾ ಅವರ ಸಾವು ಆತಂಕ ಮೂಡಿಸಿದೆ.
























I don’t think the title of your article matches the content lol. Just kidding, mainly because I had some doubts after reading the article.