Home ನಮ್ಮ ಜಿಲ್ಲೆ ಬಾಗಲಕೋಟೆ ಕುಡಚಿ – ಬಾಗಲಕೋಟೆ ರೈಲು ಮಾರ್ಗ ವಿಳಂಬ: ಸತ್ಯಾಗ್ರಹ

ಕುಡಚಿ – ಬಾಗಲಕೋಟೆ ರೈಲು ಮಾರ್ಗ ವಿಳಂಬ: ಸತ್ಯಾಗ್ರಹ

0
13

ಬಾಗಲಕೋಟೆ: ಕುಡಚಿ – ಬಾಗಲಕೋಟೆ ರೈಲು ಮಾರ್ಗ ವಿಳಂಬ ವಿರೋಧಿಸಿ ಗುರುವಾರ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದೆಂದು ಕುಡಚಿ – ಬಾಗಲಕೋಟೆ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ತಿಳಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಖಾಜಿ, ಆರ್‌ಪಿಎಫ್, ಹೊರವಲಯ ಪೊಲೀಸ್ ಠಾಣೆ ಹಾಗೂ ರೈಲು ಮಾರ್ಗ ಉಸ್ತುವಾರಿ ತಂಡದೊಂದಿಗೆ ಚರ್ಚಿಸಿದ್ದಲ್ಲದೆ ಸ್ಥಳ ಗುರುತಿಸುವ ಮೂಲಕ ಗುರುವಾರ (ಡಿ. 18) ಕುಡಚಿ ರೈಲು ನಿಲ್ದಾಣ ಎದುರು ಸತ್ಯಾಗ್ರಹ ನಡೆಸಲಾಗುವುದೆಂದು ಸ್ಪಷ್ಟಪಡಿಸಿದರು.

ನಿಡಸೋಸಿಯ ಡಾ. ದುರದುಂಡೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸತ್ಯಾಗ್ರಹ ಪ್ರಾರಂಭಗೊಳ್ಳಲಿದ್ದು, ಸುಭಾಸ ಶಿರಗೂರ, ಮೈನುದ್ದೀನ್ ಖಾಜಿ, ರಾಜೇಶ್ವರಿ ಗೌಡರ ಸೇರಿದಂತೆ ಅನೇಕರು ಪಾಲ್ಗೊಳ್ಳುವರೆಂದು ತಿಳಿಸಿದರು.