ಕೆಂಚಪ್ಪ ಬಡಿಗೇರ ಕಲೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೆಚ್ಚುಗೆ

0
4

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಖ್ಯಾತ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಧವಸ–ಧಾನ್ಯಗಳನ್ನು ಬಳಸಿ ಅತ್ಯಂತ ಸೃಜನಾತ್ಮಕವಾಗಿ ರಚಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭಾವಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಈ ವಿಶಿಷ್ಟ ಕಲಾಕೃತಿಗೆ ಅಭಿಮಾನ ಮತ್ತು ಪ್ರೀತಿಯಿಂದ ರೂಪ ನೀಡಿರುವುದಕ್ಕೆ ಸಚಿವ ಪ್ರಹ್ಲಾದ ಜೋಶಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಲಾ ಕ್ಷೇತ್ರದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಕೆಂಚಪ್ಪ ಬಡಿಗೇರ, ಚಿತ್ರಕಲೆ ಮತ್ತು ಶಿಲ್ಪಕಲೆ ಎರಡರಲ್ಲೂ ಸಮಾನ ಪರಿಣಿತಿ ಹೊಂದಿದ ಬಹುಮುಖ ಕಲಾವಿದರಾಗಿದ್ದಾರೆ. ಇವರ ಏಕವ್ಯಕ್ತಿ ಹಾಗೂ ಗುಂಪು ಚಿತ್ರಕಲಾ ಪ್ರದರ್ಶನಗಳು, ಕಾರ್ಯಗಾರಗಳು, ಉತ್ಸವಗಳು ಮತ್ತು ವಿವಿಧ ಸಭೆ–ಸಮಾರಂಭಗಳಲ್ಲಿ ಪ್ರದರ್ಶನಗೊಂಡಿದ್ದು, ಇದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಈ ಕುರಿತಂತೆ ಸಚಿವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು ಅದು ಈಗ ವೈರಲ್‌ ಆಗಿದೆ.

ಇದನ್ನೂ ಓದಿ: ಕೇರಳ ಪರ ತೋರಿದ ಕಾಳಜಿ ಕನ್ನಡಿಗರ ಪರವಾಗಿ ತೋರುತ್ತಾರಾ?

ಧವಸ–ಧಾನ್ಯಗಳಂತಹ ವಿಭಿನ್ನ ಹಾಗೂ ನೈಸರ್ಗಿಕ ಮಾಧ್ಯಮಗಳನ್ನು ಬಳಸಿ ಭಾವಚಿತ್ರ ರಚಿಸುವುದು ಅವರ ಕಲಾ ವೈಶಿಷ್ಟ್ಯವಾಗಿದ್ದು, ಇದು ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ಕೃಷಿ ಪರಂಪರೆಯೊಂದಿಗಿನ ಆಳವಾದ ಸಂಬಂಧವನ್ನು ತೋರಿಸುತ್ತದೆ. ಈ ಭಾವಚಿತ್ರವು ಕೇವಲ ಕಲಾಕೃತಿ ಮಾತ್ರವಲ್ಲದೆ, ಕಲಾವಿದನ ಭಕ್ತಿ, ಪ್ರೀತಿ ಮತ್ತು ಸಾಮಾಜಿಕ ಸಂಬಂಧಗಳ ಪ್ರತಿಬಿಂಬವೂ ಆಗಿದೆ.

ಚಿತ್ರಕಲೆಯ ಜೊತೆಗೆ ಶಿಲ್ಪಕಲೆಯಲ್ಲೂ ನೈಪುಣ್ಯ ಹೊಂದಿರುವ ಕೆಂಚಪ್ಪ ಬಡಿಗೇರ ಅವರು ಕಲ್ಲು, ಕಟ್ಟಿಗೆ, ಸಿಮೆಂಟ್, ಫೈಬರ್, ಲೋಹ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಅನೇಕ ಆಕರ್ಷಕ ಕಲಾಕೃತಿಗಳನ್ನು ರಚಿಸಿದ್ದಾರೆ. ಅವರ ಕಲಾಸಾಧನೆ ಯುವ ಕಲಾವಿದರಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಹಿನ್ನೆಲೆಯಿಂದಲೂ ರಾಷ್ಟ್ರೀಯ ಮಟ್ಟದ ಗಮನ ಸೆಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಕನ್ನಡಿಗರ ಅಸ್ಮಿತೆಗೆ ಕೇರಳದ ಕುತ್ತು: ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ‘ಖಡಕ್’ ಎಚ್ಚರಿಕೆ!

ಈ ವಿಶಿಷ್ಟ ಭಾವಚಿತ್ರ ರಚನೆಗೆ ಸಂಬಂಧಿಸಿದಂತೆ ಕೆಂಚಪ್ಪ ಬಡಿಗೇರ ಅವರಿಗೆ ಶುಭಾಶಯಗಳು ಮತ್ತು ಅಭಿನಂದನೆಗಳು ಹರಿದುಬರುತ್ತಿದ್ದು, ಅವರ ಮುಂದಿನ ಕಲಾ ಪ್ರಯತ್ನಗಳು ಇನ್ನಷ್ಟು ಎತ್ತರ ತಲುಪಲಿ ಎಂಬ ಹಾರೈಕೆಗಳು ವ್ಯಕ್ತವಾಗಿವೆ.


Previous articleಕೇರಳ ಪರ ತೋರಿದ ಕಾಳಜಿ ಕನ್ನಡಿಗರ ಪರವಾಗಿ ತೋರುತ್ತಾರಾ?