Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ನಡತೆ ಶಂಕಿಸಿ ಪತ್ನಿ ತಲೆ ಬೋಳಿಸಿದ ಭೂಪ..!

ನಡತೆ ಶಂಕಿಸಿ ಪತ್ನಿ ತಲೆ ಬೋಳಿಸಿದ ಭೂಪ..!

0
21

ಬಾಗಲಕೋಟೆ: ಪತ್ನಿಯ ನಡತೆ ಶಂಕಿಸಿರುವ ಭೂಪನೊಬ್ಬ ತನ್ನ ಪತ್ನಿಯ ತಲೆ ಬೋಳಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಮಖಂಡಿ ತಾಲೂಕು ತೊದಲಬಾಗಿ ಗ್ರಾಮದ ಉಮೇಶ ಕಾಳಿಂಗ ಕೊಟ್ಟಲಗಿ ಪತ್ನಿ ಶೀಲ ಶಂಕಿಸಿ ಈ ಕೃತ್ಯ ಎಸಗಿದ್ದಾನೆ. ಕಬ್ಬು ಕಡಿಯುವ ಕೊಯ್ತಾ ತೋರಿಸಿ ಜೀವ ಬೆದರಿಕೆ ಹಾಕಿರುವ ಆತ, ನಂತರ ಇಲೆಕ್ಟ್ರಿಕಲ್ ಟ್ರಿಮ್ಮರ್‌ನಿಂದ ಪತ್ನಿಯ ತಲೆಬೋಳಿಸಿದ್ದಾನೆ.

ಈತ ಮೊದಲಿನಿಂದ ಪತ್ನಿಯನ್ನು ಪೀಡಿಸುತ್ತಿದ್ದು, ಆಕೆಯ ತವರು ಮನೆಯವರು ಬುದ್ಧಿ ಹೇಳಿದರೂ ಆತ ಬದಲಾವಣೆ ಆಗಿರಲಿಲ್ಲ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರ ತೆಕ್ಕೆಗೆ ಬಿದ್ದಿದ್ದಾನೆ.

Previous articleಗಂಡನ ಹತ್ಯೆಗೆ ಸುಪಾರಿ, ಮೈದುನ ಬಲಿ