Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ 8 ಲಕ್ಷ ಮೌಲ್ಯದ ಗೋವಿನಜೋಳ ಬೆಂಕಿಗೆ ಆಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ 8 ಲಕ್ಷ ಮೌಲ್ಯದ ಗೋವಿನಜೋಳ ಬೆಂಕಿಗೆ ಆಹುತಿ

0
7

ಕುಳಗೇರಿ ಕ್ರಾಸ್: ಕಿತ್ತಲಿ ಗ್ರಾಮದ ಮಲಪ್ರಭಾ ನದಿ ಹತ್ತಿರ ಶಿರೋಳ ಕಡೆ ತೆರಳುವ ರಸ್ತೆ ಬದಿ ರೈತರು ತಮ್ಮ ಜಮಿನಿನಲ್ಲಿ ರಾಶಿ ಮಾಡಲು ಶೇಖರಣೆ ಮಾಡಿದ ಗೋವಿನ ಜೋಳದ ತೆನೆಗಳ ಗುಂಪಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಗೋವಿನ ಜೋಳದ ಫಸಲು ಜೊತೆಗೆ ಒಂದು ಸೆಡ್ ಹಾಗೂ ಅಪಾರ ಪ್ರಮಾಣದ ರೈತರ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ಗುರುವಾರ ನಡೆದಿದೆ.

ಕಿತ್ತಲಿ ಗ್ರಾಮದ ರೈತರಾದ ವಿನೂದ್ ಮಹಾದೇವ ಬಾಬರ್, ನಾರಾಯಣ ಶಿವಾಜಿ ಬಾಬರ್, ಹಾಗೂ ಮಹಾದೇವ ರಾಮಚಂದ್ರ ಮುಳಿಕ್, ಎಂಬುವರು ಸುಮಾರು 3೦ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆ ಜೋಳದ ತೆನೆಗಳನ್ನು ಮುರಿದು ರಾಶಿ ಮಾಡಲು ತಮ್ಮ ಹೊಲದಲ್ಲಿನ ಮನೆಯ ಮುಂದೆ ಶೇಖರಣೆ ಮಾಡಿದ್ದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗೋವಿನ ಜೋಳದ ತೆನೆಗಳಿಗೆ ಬೆಂಕಿ ತಗುಲಿದ್ದು ಬೆಂಕಿ ನಂದಿಸಲು ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನೀರುತಂದು ರೈತರು ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಬೆಂಕಿ ನಂದಿಸುವಷ್ಟರಲ್ಲಿ ಸುಮರು 6ಕ್ಕೂ ಅಧಿಕ ಟ್ರ್ಯಾಕ್ಟರ್ ನಷ್ಟು ಗೋವಿನಜೋಳದ ರಾಶಿ ಸುಟ್ಟು ಕರಕಲಾದವು. ಗೋವಿನ ರಾಶಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿರುವ ಶೆಡ್‌ಗೆ ಆವರಿಸಿದ್ದರಿಂದ ಸೆಡ್‌ನಲ್ಲಿರುವ ಹಿಟ್ಟಿನ ಗಿರಣ , ಪಂಪ್, ಕುಂಟಿ-ಕೂರಿಗೆ, ಸ್ಪಿಂಕ್ಲರ್ ಫೈಪ್ ಸೇರಿದಂತೆ ರೈತರ ಪರಿಕರಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಬಾದಾಮಿ ಅಗ್ನಿ ಶಾಮಕದಳ ಸಿಬ್ಬಂದಿ ಬರುವಷ್ಟರಲ್ಲಿ ಜನ ಬೆಂಕಿ ನಂದಿಸಿದ್ದರು. ಅಲ್ಪ-ಸ್ವಲ್ಪ ಹೊಗೆ ಇದ್ದಕಡೆ ನೀರು ಹಾಕಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ರೈತರಿಂದ ಮಾಹಿತಿ ಪಡೆದು ಮರಳಿದರು. ರೈತರು ಸಾಲ-ಶೂಲ ಮಾಡಿ ಮೆಕ್ಕೆಜೋಳ ಬೆಳೆದಿದ್ದರು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗಿಗ ಬೆಂಕಿ ಅವಘಡ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಹಳ್ಳೂರ, ಮಹಾಂತೇಶ ಕಾಶೀದ್, ಕುಮಾರ ಕಳಕನ್ನವರ ಸೇರಿದಂತೆ ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.