ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಬಸ್‌ಗೆ ಹಾನಿ: ಆರೋಪಿಗಳಿಗೆ ಶಿಕ್ಷೆ

0
14
ಶಿಕ್ಷೆ

ಬಾಗಲಕೋಟೆ: ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿ ಕಲ್ಲು ಹೊಡೆದು ಹಾನಿ ಮಾಡಿದ ಆರೋಪಿಗಳಿಗೆ ೬ ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ೧೦,೭೦೦ ರೂ.ಗಳ ದಂಡ ವಿಧಿಸಿ ಬಾಗಲಕೋಟೆ ಸಿಜೆಎಮ್‌ಎಫ್ ನ್ಯಾಯಾಲಯ ತೀರ್ಪು ನೀಡಿದೆ.
ಬಾಗಲಕೋಟೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಅನುಶಾ ಪೆಟ್ರೋಲ್ ಪಂಪ್ ಹತ್ತಿರದ ಕಾಂಚನಾ ಬಾರ್ ಎದುರುಗಡೆ ರಸ್ತೆಯ ಮೇಲೆ ದಿ. ೧೮-೯-೨೦೦೭ ರಂದು ನಡೆದ ಘಟನೆಯಲ್ಲಿ ಆರೋಪಿತರಾದ ಕಿಶೋರ ಭಾಸು ಚವ್ಹಾಣ, ರೋಹನ ಸುರೇಶ ಹಾದಿಮನಿ, ವಿನೋದ ಚಿದಾನಂದಪ್ಪ ಹಿರೇಮಠ, ಸಿದ್ದು ನಾಗಪ್ಪ ಚಿನಿವಾಲ ಉರ್ಫ ಸಿದ್ರಾಮೇಶ್ವರ, ಗುರುನಾತಯ್ಯಾ ಮಲ್ಲಯ್ಯಾ ಮಠ, ಸುನೀಲ ಶಿವಪ್ಪ ರಾಠೋಡ, ವಿಲಾಸ ಸೋಮು ರಾಠೋಡ ಇವರುಗಳೇ ಶಿಕ್ಷೆಗೊಳಗಾಗಿರುವ ಆರೋಪಿಗಳು.

Previous articleಲೋಕಾಯುಕ್ತರ ಬಲೆಗೆ ಬಿದ್ದ ಪಿಡಿಓ ಲಿಂಗಾಚಾರಿ
Next articleಧರ್ಮ ದಂಗಲ್‌ನಿಂದ ಸಿ.ಟಿ. ರವಿ ಅಧಿಕಾರಕ್ಕೆ