ಸಂಕ್ಲಾಪೂರ ವಾಂತಿ-ಬೇಧಿಗೆ ಮಗು ಬಲಿ?‌

0
16

ಬಾಗಲಕೋಟೆ: ಇಳಕಲ್ ತಾಲೂಕಿನ ಸಂಕ್ಲಾಪೂರ ಗ್ರಾಮದಲ್ಲಿ ಇತ್ತೀಚಿಗೆ ಆದ ವಾಂತಿ-ಬೇಧಿ ಅವಘಡದಲ್ಲಿ ನಾಲ್ಕು ವರ್ಷದ ಮಗು ಬಲಿಯಾಗಿದೆ ಎಂದು ಪಾಲಕರು ದೂರಿದ್ದಾರೆ.
ಈಗಾಗಲೇ ವರದಿಯಾದಂತೆ ಒಟ್ಟು 14 ಜನರನ್ನು ಬಾಗಲಕೋಟೆ ಮತ್ತು ಇಳಕಲ್ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಎಲ್ಲರೂ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ಆದರೆ ಇನ್ನೂ ಹತ್ತು ಜನರು ವಾಂತಿ-ಬೇಧಿ ಕಾರಣಕ್ಕಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗಿದ್ದರು ಹೀಗೆ ದಾಖಲಾದವರಲ್ಲಿ ನಾಲ್ಕು ವರ್ಷದ ಮಗು ನಾಗರಾಜ ಕುರಿ ಸೇರಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ವಾಂತಿ-ಬೇಧಿಗೆ ಬಲಿಯಾದ ಮಗುವಿಗೆ ಪರಿಹಾರವನ್ನು ಶಾಸಕರ ನಿಧಿಯಿಂದಾಗಲಿ ತಹಶೀಲ್ದಾರ್ ಕಚೇರಿಯಿಂದಾಲಿ ಕೊಡಬೇಕು ಜೊತೆಗೆ ವಾಂತಿ-ಬೇಧಿಗೆ ಸಿಲುಕಿದ 23 ಜನರಿಗೆ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Previous articleಕುಷ್ಟಗಿಯಲ್ಲಿ ಬಿರುಗಾಳಿ ಸಮೇತ ಮಳೆ
Next articleಓಯಾಸಿಸ್‌ನಂತಾದ ಕೃಷ್ಣೆಯ ಒಡಲು: ಹಿಪ್ಪರಗಿ ಜಲಾಶಯ ಸಂಪೂರ್ಣ ಖಾಲಿ ಖಾಲಿ