ರಾಜೀನಾಮೆ ಕೊಟ್ಟೆ ಎಂದು ಯೂ ಟರ್ನ್ ಹೊಡೆದಿದ್ದೇಕೆ ?

0
15

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಟ್ವೀಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ, ಶಾಸಕಾಂಗದ ಕಾರ್ಯವ್ಯಾಪ್ತಿಯ ಅರಿವಿಲ್ಲದ ನಳಿನ ಕುಮಾರ ಕಟೀಲ್‌ ಅವರೇ, ನೀವು ಅಧಿಕಾರ ಕಳೆದುಕೊಂಡಿದ್ದೇ ಇಂತಹ ಅಜ್ಞಾನಕ್ಕೋಸ್ಕರ. ಸಂಸದರಾಗಿರುವ ನಿಮಗೆ ನಿಮ್ಮ ಸ್ಥಾನದ ಹೊಣೆಯ ಅರಿವಿಲ್ಲದಿರಬಹುದು, ನನಗೆ ನನ್ನ ಹೊಣೆಯ ಅರಿವಿದೆ. ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಜಿಲ್ಲೆಯ ಎಲ್ಲಾ ಇಲಾಖೆಗಳ ಆಗುಹೋಗುಗಳಿಗೂ ಹೊಣೆಯಾಗಿರುತ್ತೇನೆ. ನನ್ನ ಜಿಲ್ಲೆಯ ಗೃಹ ಇಲಾಖೆಯನ್ನೂ ನಾನೇ ನಿಯಂತ್ರಿಸಬೇಕಿರುವುದು ನನ್ನ ಕರ್ತವ್ಯ. ನಿಮ್ಮ ಪಕ್ಷದವರಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲದಿರುವುದಕ್ಕಾಗಿಯೇ ಜನತೆ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ. ನಿಮ್ಮ 40% ಸರ್ಕಾರ ಈ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ರೈತರು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದನ್ನು ರಾಜ್ಯ ಕಂಡಿದೆ. ನಿಮ್ಮಂತ ವಿಫಲ ಆಡಳಿತಗಾರರಿಂದ ನಾವು ಆಡಳಿತಾತ್ಮಕ ಪಾಠ ಕಲಿಯುವ ಅಗತ್ಯವಿಲ್ಲ. ಅಧ್ಯಕ್ಷಗಿರಿಗೆ ರಾಜೀನಾಮೆ ಕೊಟ್ಟೆ ಎಂದು ಯೂ ಟರ್ನ್ ಹೊಡೆದಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಿ, ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಕಾರ್ಯಕರ್ತರು ನಿಮಗೆ ಟಿಕೆಟ್ ಕೊಡಬಾರದು ಎನ್ನುತ್ತಿದ್ದಾರಂತೆ, ಒಮ್ಮೆ ಆ ಕಡೆ ಗಮನ ಹರಿಸಿ ನಿಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಿ! ಎಂದು ಚಾಟಿ ಬೀಸಿದ್ದಾರೆ.

Previous articleಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡಿದ್ದಾರೆ
Next articleಕರಡಿ ದಾಳಿ: ಇಬ್ಬರು ರೈತರಿಗೆ ಗಂಭೀರ ಗಾಯ