ರಾಜಕೀಯ ಪಕ್ಷಗಳ ನಡುವೆ ತೀವ್ರ ವಾಗ್ವಾದ, ಬಾಗಲಕೋಟೆ ನವನಗರದಲ್ಲಿ ಆತಂಕದ ವಾತಾವರಣ

0
12

ಬಾಗಲಕೋಟೆ: ನವನಗರದ ಸೆಕ್ಟರ್ ನಂ.೩೪ರ ಬೂತ್ ೧೫೯,೧೬೦ರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬೇರೆ ಊರಿಗಳಿಂದ ಕಲಿಯಲು ಬಂದಿರುವ ವಿದ್ಯಾರ್ಥಿಗಳು ಮತದಾನಕ್ಕೆ ಮುಂದಾಗಿರುವುದಕ್ಕೆ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲು ‌ಮುಂದಾದರು ಆಗ ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ತೀವ್ರ ವಾಗ್ವಾದ ಏರ್ಪಟ್ಟಿತು.

ಕೊನೆಗೆ ಡಿವೈಎಸ್ಪಿ ಪ್ರಶಾಂತ ಮನ್ನೊಳಿ ಸ್ಥಳಕ್ಕೆ ಆಗಮಿಸಿ ಮತದಾನ ಮಾಡಲು ನಿಯಮದ ಪ್ರಕಾರ ಅವಕಾಶವಿರುತ್ತದೆ.ಯಾರೂ ಅಡ್ಡಿಪಡಿಸುವಂತ್ತಿಲ್ಲ. ಏನೆಯಿದ್ದರೂ ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

Previous articleಕುಟುಂಬ ಸಮೇತ ಆಗಮಿಸಿ ಜಗದೀಶ ಶೆಟ್ಟರ್ ಮತದಾನ
Next articleಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು