ನೇಯ್ಗೆ ಬಂದ್: ಮತ್ತೇ ಅತಂತ್ರದಲ್ಲಿ ಕೈಮಗ್ಗ ನೇಕಾರ

0
10

ಬಾಗಲಕೋಟೆ: ವಿದ್ಯಾ ವಿಕಾಸ ಯೋಜನೆಯಡಿ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಕೆಎಚ್‌ಡಿಸಿಯಿಂದ ಬಟ್ಟೆ ಖರೀದಿ ಮಾಡಲಾಗುವದಿಲ್ಲವೆಂಬ ಮೌಖಿಕ ಆದೇಶದನ್ವಯ ಕಳೆದೊಂದು ವಾರದಿಂದ ಕೈಮಗ್ಗ ನೇಕಾರರಿಗೆ ಕಚ್ಚಾ ನೂಲು ಪೂರೈಕೆ ಮಾಡಿರುವದನ್ನು ಸ್ಥಗಿತಗೊಳಿಸಿರುವದು ಆತಂಕದ ಬೆಳವಣಿಗೆ ಕಾರಣವಾಗಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಪ್ರಧಾನ ಘಟಕದಿಂದ ಪೂರೈಕೆಯಾಗುತ್ತಿದ್ದ ರಬಕವಿ, ನಾವಲಗಿ, ಹಳ್ಯಾಳ, ಹುನ್ನೂರ, ಸಿದ್ಧಾಪೂರ, ಜಮಖಂಡಿ ಹಾಗು ವಿಜಯಪುರ ಜಿಲ್ಲೆಯ ತಾಂಬಾ ದೋಡಿಹಾಳ ಉಪಘಟಕಗಳಿಂದ ನೇಕಾರರಿಗೆ ಕಚ್ಚಾ ನೂಲು ನೀಡುತ್ತಿಲ್ಲ ಇದರಿಂದ ನೇಕಾರರು ಉದ್ಯೋಗವಿಲ್ಲದೆ ಕಂಗಾಲಾಗುವಲ್ಲಿ ಕಾರಣವಾಗಿದೆ.

ಈ ಮೊದಲು ಬೆಂಗಳೂರು, ಮೈಸೂರು, ಬೆಳಗಾವಿ ಹಾಗು ಕಲಬುರಗಿ ವಿಭಾಗಗಳಲ್ಲಿನ ಒಂದು ವಿಭಾಗಕ್ಕೆ ಪ್ರತಿ ವರ್ಷ ಸುಮಾರು 6-7 ಲಕ್ಷ ಮೀಟರ್‌ನಷ್ಟು ಬಟ್ಟೆ ಪಡೆಯುತ್ತಿದ್ದರು. ಈ ಬಾರಿ ಸುತಾರಾಮ ಬೇಡವೆಂದಿರುವ ಸರ್ಕಾರದ ಆದೇಶ ಕೈಮಗ್ಗ ನೇಕಾರರ ಹೊಟ್ಟೆಗೆ ತನ್ನೀರು ಬಟ್ಟೆ ಹಾಕಿದಂತಾಗಿದೆ.

ರಾಜ್ಯದಲ್ಲಿ ಕೇವಲ 3800 ಕೈಮಗ್ಗ ನೇಕಾರರು ಮಾತ್ರ ಉಳಿದಿದ್ದು, ಅದರಲ್ಲಿ ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ 2300 ನೇಕಾರರಿದ್ದಾರೆ.

ಇವೆಲ್ಲ ಕುಟುಂಬಗಳಿಗೆ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ತೀವ್ರವಾಗಿದೆ.

ಅಲ್ಲದೆ ಕೆಎಚ್‌ಡಿಸಿಗೆ ಶಿಕ್ಷಣ ಇಲಾಖೆಯಿಂದ ಅಂದಾಜು 30 ಕೋಟಿ ರೂ.ಗಳಷ್ಟು ಬಾಕಿಪಾವತಿಸಬೇಕಿದೆ. ನೇಕಾರರಿಗೆ ಕಚ್ಚಾ ನೂಲು ಪೂರೈಸಿದರೆ ಅವರ ವೇತನನ ಪಾವತಿ ಮಾಡಲು ನಿಗಮಕ್ಕೆಹಣದ ಕೊರತೆ ಕಾಡುತ್ತದೆ. ಹೀಗಾಗಿ ರಾಜ್ಯಾದ್ಯಂತ ನೇಕಾರರಿಗೆ ನಿಗಮವು ಕಚ್ಚಾ ನೂಲು ಪೂರೈಸಲು ಮೀನಮೇಷ ಎನಿಸುತ್ತಿದೆ.

Previous articleಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರೇ ಅಡ್ಡಿ
Next articleಅನೈತಿಕ ಸಂಬಂಧ: ಹೆತ್ತ ಮಗುವನ್ನು ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ