ನಾನ್ ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ

0
20
ಸಿಟಿ ರವಿ

ಬೆಂಗಳೂರು: ನಾನು ನಾನ್ ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅಲ್ಲದೇ ಅಲ್ಲಿನ ಸ್ಥಳೀಯರ ಅಪೇಕ್ಷೆ‌ ಮೇರೆಗೆ ದೇವಸ್ಥಾನಕ್ಕೆ ಹೋಗಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದರು.
ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆದ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ನಾನ್ ವೆಜ್ ತಿಂದಿದ್ದು ಹೌದು, ಆದರೆ ದೇವಸ್ಥಾನದ ಒಳಗೆ ಹೋಗಲಿಲ್ಲ. ಗರ್ಭಗುಡಿಯ ಹೊರಭಾಗದಲ್ಲಿ ಇದ್ದೆ ಎಂದಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡುವುದು ಮೊದಲೇ ನಿರ್ಧಾರ ಮಾಡಿರಲಿಲ್ಲ. ಅಲ್ಲಿನ ಸ್ಥಳೀಯರೇ ಕರೆದುಕೊಂಡು ಹೋಗಿದ್ದರು. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ. ಕಾಂಗ್ರೆಸ್‌ನವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.

Previous articleನನ್ನ ಕ್ಷೇತ್ರದ ತೀರ್ಮಾನ ಮಾಡೋಕೆ ಬಿಎಸ್‌ವೈ ಯಾರು?
Next articleಅನಧಿಕೃತ ಶಸ್ತ್ರಾಸ್ತ್ರ ತರಬೇತಿ: ಕಮ್ಯುನಿಟಿ ಹಾಲ್​ ಎನ್​ಐಎ ವಶಕ್ಕೆ