ನಾನು ಇನ್ನೂ ಪತ್ರ ನೋಡಿಲ್ಲ

0
8

ಬೆಂಗಳೂರು: ನಾನು ಇನ್ನೂ ಪತ್ರ ನೋಡಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಕುರಿತು ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು ಶಾಸಕರಿಗೆ ಮನವಿ ಸಲ್ಲಿಸಿದರೆ, ಮಂತ್ರಿಗಳಿಗೆ ಮನವಿ ಸಲ್ಲಸಿದರೆ ನಮಗೆ ಕಳುಹಿಸಿಕೊಡುತ್ತಾರೆ. ಆ ಮನವಿ ನನಗೆ ಬರುತ್ತದೆ, ಇಲ್ಲದಿದ್ರೆ ಇಲಾಖೆ ಡಿಜಿಗೆ ಕಳುಹಿಸುತ್ತಾರೆ. ಆಗ ನಾವು ಕ್ಯಾಬಿನೆಟ್​​ ಸಬ್​ ಕಮಿಟಿ ಮುಂದೆ ಚರ್ಚೆ ಮಾಡುತ್ತೇವೆ. ಏನೇನು ಸೆಕ್ಷನ್ ಹಾಕಿರುತ್ತಾರೆ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಅಂತಿಮವಾಗಿ ಕೇಸ್ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡುತ್ತೆ. ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ನಾವು ಏನು‌ ಮಾಡಬೇಕು. ನಾನು ಇನ್ನೂ ಪತ್ರ ನೋಡಿಲ್ಲ, ಒಂದು ವೇಳೆ ಪತ್ರ ಬರೆದ್ರೂ ತಪ್ಪಿಲ್ಲ, ನನಗೆ ನೇರವಾಗಿ ಬಂದಾಗ ನಾನು ಒಂದು ಸಾರಿ ಕ್ಯಾಬಿನೆಟ್‌ ಸಬ್‌ ಕಮಿಟಿ ಮುಂದೆ ಮಂಡನೆ ಮಾಡಿ ಎಂದು ಬರಿತೇನಿ, ಆಗ ಅವರು ಮಂಡನೆ ಮಾಡುತ್ತಾರೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Previous articleಪತ್ನಿ, ಮಗ ಸೇರಿ ಲಾಲೂ ಪ್ರಸಾದ್‌ಗೆ ಜಾಮೀನು
Next articleಆಯಕಟ್ಟಿನ ಇಲಾಖೆ: ಜಾತಿ ಮಾಹಿತಿ ಸೋರಿಕೆ