ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್: 25 ಕಡೆ ದಾಳಿ

0
10

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಚಿನ್ನದ ಉದ್ಯಮಿಗಳು, ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಳಗೂರಿನ 25 ಸ್ಥಳಗಳಲ್ಲಿ ಏಕಕ್ಕಾಲದಲ್ಲಿ ದಾಳಿ ನಡೆಸಿದ್ದಾರೆ. ಜಯನಗರ, ಜೆ.ಪಿ.ನಗರ,ಬಸವನಗುಡಿ, ಆರ್ ಆರ‍್ ನಗರ ಸೇರಿದಂತೆ ಒಟ್ಟು 25 ಸ್ಥಳಗಳಲ್ಲಿ ಏಕಕ್ಕಾಲದಲ್ಲಿ 300 ಅಧಿಕಾರಿಗಳು ದಾಳಿ ನಡೆಸಿ ಚಿನ್ನಡಂಗಡಿಯ ಮಾಲೀಕರ ಮನೆ, ಕಚೇರಿ, ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

Previous articleಪಕ್ಷಕ್ಕಿಂತ ವ್ಯಕ್ತಿಗಳು ದೊಡ್ಡವರಾಗಿದ್ದಾರೆ
Next articleಬಡವರಿಗೆ ನಿವೇಶನ/ ಮನೆ ಕಟ್ಟಲು ಕಾನೂನು ಸರಳೀಕರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ