ಚಪಾತಿ-ಉಸುಳಿಗೆ ಫಿದಾ ಆದ ಬಿಜೆಪಿ ನಾಯಕರು

0
12
ಬಿಜೆಪಿ

ಹಾ.. ನಿಮ್ಗೇನ್ ಬೇಕ್ರಿ..? ಕೊಡ್ರೀನಿ ತಡ್ರೀ.. ಹೀಗೆ ಸಾಮಾನ್ಯ ಹೊಟೇಲ್‌ನಲ್ಲಿ ಗ್ರಾಹಕರನ್ನು ಕೇಳುವದು ರೂಢಿ. ಇಂತಹ ಹೊಟೇಲ್‌ನಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ, ಶಾಸಕ ಸಿದ್ದು ಸವದಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯಅರುಣ ಶಹಾಪೂರ, ಮನೋಹರ ಶಿರೋಳ ಸೇರಿದಂತೆ ಅನೇಕರು ಸಾಮಾನ್ಯ ಹೊಟೇಲ್‌ನಲ್ಲಿ ಸಾಮಾನ್ಯರಂತೆ ಯಾವದೇ ಬಿಗುಮಾನವಿಲ್ಲದೆ ಜನರ ಮಧ್ಯದಲ್ಲಿಯೇ ಖಾರದ ಚಪಾತಿ, ಶೇಂಗಾ ಉಸುಳಿ ಭರಪೂರ ನ್ಯಾರಿ ಮಾಡಿದ ಪ್ರಸಂಗ ನಡೆಯಿತು.

ಮಂಗಳವಾರ ಬಾಗಲಕೋಟ ಜಿಲ್ಲೆಯ ಬನಹಟ್ಟಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮುಂಚೆ ಉಪಹಾರ ಸಮಯಕ್ಕೆ ಸಾಮಾನ್ಯ ಹೊಟೇಲ್ ಮುಂದೆ ಏಕಾಏಕಿ ಕಾರ್‌ಗಳ ನಿಲುಗಡೆ ನಿಜಕ್ಕೂ ನಗರದ ನೇಕಾರರಲ್ಲಿ ವಿಶೇಷವೆನಿಸುತ್ತು. ನೇಕಾರ ಪ್ರಿಯವಾದ ಶೇಂಗಾ ಉಸುಳಿ-ಚಪಾತಿಗೆ ಫೇಮಸ್ ಆಗಿರುವ ಶೇಖರಯ್ಯ ಮಠದ ಹೊಟೇಲ್‌ಗೆ ಜನಪ್ರತಿನಿಧಿಗಳೇ ದಂಡೇ ಆವರಿಸಿದಾಗ ಹೊಟೇಲ್ ಮಾಲಿಕ ಕ್ಷಣ ಹೊತ್ತು ದಿಗ್ಬ್ರಾಂತನಾಗಿ ನಂತರ ನಿಮ್ಗೇನ್ ಬೇಕ್ರೀ..? ಎಂದು ಎಲ್ಲರನ್ನೂ ಕೇಳಿ ಉಪಹಾರ ಬಡಿಸಿದ.

Previous articleಪಿಎಸ್ಐನನ್ನು ಎಳೆದಾಡಿದ ಜೆಡಿಎಸ್ ಕಾರ್ಯಕರ್ತರು
Next articleಬಾಬಾಸಾಹೇಬರ ಭಾವಚಿತ್ರ ಇಡದೇ ಅಗೌರವ ತೋರಿದ್ದ ವಾರ್ಡನ್ ಸುಧಾ ಅಮಾನತು