ಗ್ಯಾರಂಟಿ ಸರ್ಕಾರ ಉಳಿಯಲ್ಲ ಎಂದವರಿಗೆ: ಭಾಷಣ ಮಾಡೋದು ಬಿಡಿ ಎಂದು ತಿರುಗೇಟು

0
12

ಬೆಂಗಳೂರು: 65ಇರೋದು 165 ಆಗುತ್ತಾ.?ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರಾ ಎಂದು ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಸರ್ಕಾರ ಉಳಿಯುವುದಿಲ್ಲ ಎಂಬ ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೀವಮಾನದಲ್ಲಿ ಯಾವತಾದ್ರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿ ಕೆಲಸ ಮಾಡಿದ್ದಾರಾ‌‌..? ಜನರೇ ನಿರ್ಧಾರ ಕೊಟ್ಟಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಬೇಡ ಎಂದು. ಬಿಜೆಪಿ ಅಂದ್ರೇ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿರೀ. ಭಾಷಣ ಮಾಡೋದು ಬಿಡಿ ಎಂದು ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಪ್ರಾಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೆವೆ. ಯಾವುದೇ ಇಲಾಖೆಯಲ್ಲಿ ಹಗರಣ ಆಗಿದ್ದರೂ ತನಿಖೆ ನಡೆಸುತ್ತೆವೆ. ಸರ್ಕಾರದ ಹಣ ಜನರಿಗೆ ಸೇರಬೇಕು. ಅಲ್ಲಿ ತಪ್ಪಾಗಿದ್ದರೆ ಯಾರೇ ಅದರೂ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕರ ನೇಮಕಾತಿ ಹಗರಣದ್ದು ತನಿಖೆ ನಡೆಯುತ್ತಿದೆ. ರಾಜ್ಯ ಹಾಗೂ ಕೇಂದ್ರದ ನಡುವೆ ಅಕ್ಕಿ ಸಂಘರ್ಷ ವಿಚಾರವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನು ಕೇಳುತ್ತಿಲ್ಲ. ನಾವು ಬೇರೆ ಏನು ಬುಸಿನೆಸ್ ಮಾಡುತ್ತಿಲ್ಲ. ಸೋತಾಗ ಸಹಜವಾಗಿ ಎಲ್ರೂ ಮಾತಾಡುತ್ತಾರೆ. ಅದನ್ನೇ ಬಿಜೆಪಿ ಕೂಡ ಮಾಡುತ್ತಿದೆ. ಜನರು ಕೂಡ ಇದನ್ನು ಗಮನಿಸುತ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿರು.

Previous article256 ಉಪ ನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಜಾರಿ
Next articleಕೇಂದ್ರ ಸರ್ಕಾರ ಒಕ್ಕೂಟ ಧರ್ಮ ಪಾಲನೆ ಮಾಡಬೇಕು