ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು

0
10
ಅಜಯ ಕಬಾಡಿ

ಧಾರವಾಡ: ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ಡಿಕೆಟರೆಂಡ್ ಸಂಸ್ಥೆಯ ಸಿಇಒ ಅಜಯ್ ಕಬಾಡಿ ಹೇಳಿದರು.
ಅವರು ರಾಷ್ಟ್ರೀಯ ಯುವಜನೋತ್ಸವದ ನಿಮಿತ್ತ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಶೃಂಗಸಭೆಯಲ್ಲಿ ಮಾತನಾಡಿದರು. ಕೃತಕ ಬುದ್ಧಿಮತ್ತೆ ವ್ಯಾಪಕವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಮಾತ್ರವಲ್ಲದೇ ಇದರ ಬಳಕೆ ಹೆಚ್ಚಿಸುವ ಕುರಿತು ನಿರಂತರ ಸಂಶೋಧನೆ ನಡೆಯುತ್ತಿದೆ ಎಂದರು.
ಚಾಲಕ ರಹಿತ ಕಾರ್‌ಗಳಲ್ಲಿ ಮಾತ್ರ ಬಳಕೆಯಲ್ಲಿದ್ದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೃಷಿಗೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೃಷಿಯಲ್ಲಿ ನೀರಿನ ಸದ್ಬಳಕೆ, ರಸಗೊಬ್ಬರ ನೀಡಿಕೆಯಲ್ಲಿ ಬಳಕೆ ಮಾಡಿದರೆ ಕೃಷಿ ಖರ್ಚು ಕಡಿಮೆ ಮಾಡಬಹುದಲ್ಲದೇ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ. ಯುವಕರು ಆಸಕ್ತಿಯಿಂದ ಈ ಕ್ಷೇತ್ರದ ಅಧ್ಯಯನ ಮಾಡಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

Previous articleಯತ್ನಾಳ್ ಹೇಳಿಕೆಗೆ ಮುರುಗೇಶ್ ನಿರಾಣಿ ಕಣ್ಣೀರು!
Next articleʼಯುಐʼನ ಹೆಸರಲ್ಲೇ ಸಂಕ್ರಾತಿ ಶುಭಾಶಯ