ಕಾಂಗ್ರೆಸ್‌ನಿಂದ ಸ್ಟಾಲಿನ್​ಗೂ ನೀರು ಫ್ರೀ

0
22

ಬೆಂಗಳೂರು: ಮಹದೇವಪ್ಪ ನಿನಗೂ ಫ್ರೀ ಕಾಕಾಪಾಟೀಲ್ ನಿನಗೂ ಫ್ರೀ ಅಂತಾ ಹೇಳಿದ್ದ ಕಾಂಗ್ರೆಸ್​ ಈಗ ತಮಿಳುನಾಡು ಸಿಎಂ ಸ್ಟಾಲಿನ್​ಗೂ ನೀರು ಫ್ರೀ ಎಂದಿದೆ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಮಾತನಾಡಿರುವ ಅವರು, ತಮಿಳುನಾಡು ತಮ್ಮ ಬೆಳೆಗೆ ನೀರು ಕೇಳುತ್ತಿದೆ. ಆದರೆ ನಮಗೆ ಕುಡಿಯಲು ನೀರಿಲ್ಲ. ಕುರುಬೂರು ಶಾಂತಕುಮಾರ್ ನೇತೃತ್ವದ ಸೆ. 26ರ ಬೆಂಗಳೂರು ಬಂದ್​ಗೆ ಬಿಜೆಪಿ ಬೆಂಬಲ ನೀಡಲಿದೆ. ಬಂದ್​ ಬೆಂಬಲಿಸುವಂತೆ ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ ಎಂದರು ಅವರು ಹೇಳಿದ್ದಾರೆ.

Previous articleಮಸೀದಿ ಮೇಲೆ ಭಗವಾಧ್ವಜ
Next article‘ಮನ್‌ ಕಿ ಬಾತ್‌’ನಲ್ಲಿ : ಜರ್ಮನ್ ಯುವತಿಯ ಕನ್ನಡ ಹಾಡಿಗೆ ಶ್ಲಾಘನೆ