ಶ್ರೀರಂಗಪಟ್ಟಣ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಪ್ಟೆಂಬರ್ 1ರಿಂದ 5ನೇ ತಾರೀಕು ವರೆಗೆ ನಡೆಯಲಿರುವ 52ನೇ ರಾಷ್ಟ್ರಮಟ್ಟದ ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿಗೆ ತೆರಳುವ ಕರ್ನಾಟಕ ತಂಡದ ಆಟಗಾರರಿಗೆ ಶುಭ ಕೋರಿ ಬೀಳ್ಕೊಡಲಾಯಿತು.
ಶ್ರೀರಂಗಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್, ಮಂಡ್ಯ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಮತ್ತು ಅಚೀವರ್ಸ್ ಅಕಾಡೆಮಿ ಇವರ ವತಿಯಿಂದ ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಪುರುಷರ ಹ್ಯಾಂಡ್ ಬಾಲ್ ಸ್ಪರ್ಧೆಗೆ ಕಳೆದ 15 ದಿವಸಗಳಿಂದ ತರಬೇತಿ ಶಿಬಿರವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಯಿತು.
ಈ ಶಿಬಿರದಲ್ಲಿ ಭಾಗವಹಿಸಿದ ರಾಜ್ಯದ ವಿವಿದೆಡೆಯ ಕ್ರೀಡಾಪಟುಗಳಿಗೆ ಗಾಂಧಿವಾದಿ ಡಾ. ಸುಜಯ್ ಕುಮಾರ್ ಅಭಿನಂಧಿಸಿ ಶುಭಕೋರಿದರು. ಇದೇ ವೇಳೆ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭವಾಗಲಿ. ಉತ್ತಮವಾದ ಆಟವನ್ನು ಆಡಿ ರಾಜ್ಯಕ್ಕೆ ಕೀರ್ತಿಯನ್ನ ತರಬೇಕು ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಬಿ.ಜಿಕುಮಾರ್, ಶ್ರೀರಂಗನಾಯಕಿ ಸಮಾಜದ ಮುಖ್ಯಸ್ಥರಾದ ಆಶಾಲತಾ ಪುಟ್ಟೇಗೌಡ, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ನಿತ್ಯಾನಂದ ಸುರೇಂದ್ರ, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ತರಬೇತಿದಾರ ಡಾ.ರಾಘವೇಂದ್ರ, ನಿರ್ದೇಶಕರಾದ ದೇವರಾಜ, ದಕ್ಷತ್, ತಂಡದ ನಾಯಕ ಸಂಜಯ್ ಪಟೋಲಿ, ಕ್ರೀಡಾಪಟುಗಳು ಹಾಗೂ ಅಚೀವರ್ಸ್ ಅಕಾಡೆಮಿಯ ಶ್ರೀಧರ್, ನಿಸರ್ಗ, ಭಗತ್ ಸೂರ್ಯ, ದೀಕ್ಷಿತ್, ಸುನಿಲ್, ಗುರುಪ್ರಸಾದ್, ಅನನ್ಯ, ತೇಜು, ಯಶಸ್ವಿನಿ, ಧನುಷ್, ಪ್ರಖ್ಯಾತ್ ಇನ್ನು ಮುಂತಾದವರು ಸೇರಿ ರಾಜ್ಯ ತಂಡಕ್ಕೆ ಶುಭ ಕೋರಿದರು.