ಕಬ್ಬು ಬೆಲೆ ನಿಗದಿ: ಮುಧೋಳ ಬಂದ್

0
15
mudol

ಮುಧೋಳ (ಬಾಗಲಕೋಟೆ): ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತ ಸಂಘದ ಮುಖಂಡರು ಬುಧವಾರ ಮುಧೋಳ ಬಂದ್ ಮಾಡಿದ್ದಾರೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅಂಗಡಿಗಳು ಮುಚ್ಚಿವೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಪ್ರತಿ ಟನ್‌ ಕಬ್ಬಿಗೆ ₹2,900 ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಿಷೇಧಾಜ್ಞೆ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನ.16 ಬೆಳಿಗ್ಗೆಯಿಂದ ನ.19ರ ಮಧ್ಯರಾತ್ರಿಯವರೆಗೆ ಮುಧೋಳ ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮುಧೋಳದಲ್ಲಿ ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜಮಖಂಡಿ, ನಿಪ್ಪಾಣಿ ಮುಂತಾದ ಕಡೆಗಳಿಂದ ಬಾಗಲಕೋಟೆಗೆ ಬರಬೇಕಾಗಿದ್ದ ಬಸ್‌ಗಳು ಬಂದಿಲ್ಲ. ಈ ಕಡೆಯಿಂದಲೂ ಯಾವುದೇ ಬಸ್‌ ಹೋಗಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

Previous articleಸರಳ ನಗರ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಿ: ಸಿಎಂ
Next articleಶಾಲೆಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಹಾಕುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಖಂಡನೀಯ: ಚಕ್ರವರ್ತಿ ಸೂಲಿಬೆಲೆ