ದಾವಣಗೆರೆ: ಆನ್‌ಲೈನ್ ಜಾಬ್ ಮೋಸದ ಜಾಲಕ್ಕೆ ಸಿಲುಕಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು 1.99 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಜಿಲ್ಲೆಯ ಜಗಳೂರು ತಾಲ್ಲೂಕಿನ ನಿವಾಸಿ ಹೆಚ್.ಎಂ.ಪ್ರದೀಪ್ ಕುಮಾರ್ ಹಣ ಕಳೆದುಕೊಂಡವರು. ಫೇಸ್ ಬುಕ್ ನಲ್ಲಿ ಉದ್ಯೋಗಕ್ಕೆ ಸಂಪರ್ಕಿಸುವಂತೆ ಇದ್ದ ಮೊಬೈಲ್‌ಸಂಖ್ಯೆಗೆ ಮೆಸೇಜ್ ಮಾಡಿದಾಗ ಮನೆಯಲ್ಲೇ ಕೆಲಸ ಎಂಬುದಾಗಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್‌ಮೂಲಕ ಲಿಂಕ್ ಕಳುಹಿಸಿದ್ದ. ಲಿಂಕ್ ತೆರೆದಾಗ ಪ್ರಾಡೆಕ್ಟ್ ಖರೀದಿಸಿದರೆ ಕಮಿಷನ್ ನೀಡುವುದಾಗಿ ಆಮಿಷ ತೋರಿದ್ದಾರೆ.
ಇದನ್ನು ನಂಬಿದ ಪ್ರದೀಪ್ ಲಿಂಕ್‌ನಿಂದ ಅಕೌಂಟ್ ಓಪನ್ ಮಾಡಿ ಅವರು ಹೇಳಿದ ನಂಬರ್ ಗೆ 300 ಕಳುಹಿಸಿದಾಗ ವಾಪಸ್638 ರೂ., ಬಂದಿದೆ. ಇದರಿಂದ ಉತ್ತೇಜಿತರಾದ ಪ್ರದೀಪ್ ವಿವಿಧ ಹಂತಗಳಲ್ಲಿ ತಮ್ಮ ಖಾತೆಯಿಂದ 1.09 ಲಕ್ಷ ರೂ. ಹಾಗೂ ಪತ್ನಿಯ ಅಕೌಂಟ್ ನಿಂದ 90 ಸಾವಿರ ಕಳುಹಿಸಿದ್ದಾರೆ. ಆನಂತರ ಯಾವುದೇ ಕಮಿಷನ್ ಬಾರದೇ ಹೋದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸಿಇಎನ್ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.