ಬೆಂಗಳೂರು: ಸರಕಾರದ ಬೊಕ್ಕಸವನ್ನು ಬಿಜಪಿ ಲೂಟಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಯೋಜನೆಗಳಿಗೆ ಯದ್ವಾತದ್ವಾ ಒಪ್ಪಿಗೆ ನೀಡುವ ಮೂಲಕ ಸರಕಾರದ ಬೊಕ್ಕಸವನ್ನು ಅವರು ಲೂಟಿ ಮಾಡುತ್ತಿದ್ದಾರೆ. ಹೆಚ್ಚಿನ ಬೆಲೆಗೆ ಪ್ರಾಜೆಕ್ಟ್‌ಗಳನ್ನು ನೀಡುವ ಮೂಲಕ ಕಮೀಷನ್‌ನಲ್ಲಿ ಹೆಚ್ಚು ಹೆಚ್ಚು ಹಣವನ್ನು ಬಾಚಿಕೊಳ್ಳುವ ದುರುದ್ದೇಶ ಬಿಜೆಪಿಗರದ್ದಾಗಿದೆ. ನಾವು ಇದನ್ನು ಲಾಜಿಕಲ್ ಎಂಡ್ಗೆ ತಗೆದುಕೊಂಡು ಹೋಗುತ್ತೇವೆ. ಕಾಂಟ್ರಾಕ್ಟರ್ಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕ್ತೀವಿ. ಯಾರನ್ನೂ ಬಿಡಲ್ಲ, ಎಲ್ಲರನ್ನೂ ಜೈಲಿಗೆ ಹಾಕ್ತೀವಿ. ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ತನಿಖೆ ಮಾಡಿಸ್ತೇವೆ. ಅಧಿಕಾರಕ್ಕೆ ಬಂದ ತಕ್ಷಣ 40% ಕಮಿಷನ್ ಹಗರಣ ತನಿಖೆ ಮಾಡಿಸುತ್ತೇವೆ ಎಂದರು.