ಬೆಂಗಳೂರು: ಎಲಿವೇಟರ್ ಮತ್ತು ಎಸ್ಕಲೇಟರ್ ಉದ್ಯಮದ ಜಾಗತಿಕ ಸಂಸ್ಥೆಯಾಗಿರುವ ಕೋನೆ ಹಾಗೂ ಮಾ ಫೋಯ್ ಫೌಂಡೇಶನ್, ಭಾರತದ ವರ್ಟಿಕಲ್ ಟ್ರಾನ್ಸ್ ಪೋರ್ಟೇಶನ್ ಕ್ಷೇತ್ರಕ್ಕೆ ನೈಪುಣ್ಯ ಹೊಂದಿದ ಮತ್ತು ಉದ್ಯಮಕ್ಕೆ ಸಿದ್ಧವಿರುವ ಕಾರ್ಯಪಡೆಯನ್ನು ರೂಪಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದಕ್ಕೆ ಪೂರಕವಾಗಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಕೋನೆ ಸಂಸ್ಥೆಯ ಸಿಎಸ್ಆರ್ ಯೋಜನೆಯ ಭಾಗವಾಗಿ ಪ್ರಾರಂಭಿಸಲಾದ ಈ ಪ್ರಮುಖ ಯೋಜನೆಯು, 150 ಯುವಜನರಿಗೆ ಲಿಫ್ಟ್ ಅಳವಡಿಕೆ ಮತ್ತು ಉದ್ಯಮಕ್ಕೆ ಪೂರಕವಾದ ವರ್ಟಿಕಲ್ ಟ್ರಾನ್ಸ್ ಪೋರ್ಟೇಶನ್ ಕೌಶಲ್ಯಗಳಲ್ಲಿ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲಿದೆ.
ಬಿಎಸ್ವಿಟಿ ಸಂಸ್ಥೆಯನ್ನು ಪರಿಣಿತ ತರಬೇತಿ ಪಾಲುದಾರರನ್ನಾಗಿ ನೇಮಿಸಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿರುವ ಸಂಸ್ಥೆಯ ಅತ್ಯಾಧುನಿಕ ತರಬೇತಿ ಕೇಂದ್ರದಲ್ಲಿ ವ್ಯವಸ್ಥಿತ ವಸತಿ ಮಾದರಿಯ ಮೂಲಕ ಈ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಭಾರತದ ಎಲಿವೇಟರ್ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದ್ದು, ಆ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮವು, ತಂಡಕ್ಕೆ ಒಂದು ತಿಂಗಳ ಅವಧಿಯಲ್ಲಿ ತೀವ್ರತರವಾದ ತರಬೇತಿಯನ್ನು ನೀಡಲಿದೆ. ಇದರಲ್ಲಿ ಲಿಫ್ಟ್ ಅಳವಡಿಕೆ, ಸುರಕ್ಷತಾ ನಿಯಮಗಳ ಪಾಲನೆ ಮತ್ತು ವರ್ಟಿಕಲ್ ಟ್ರಾನ್ಸ್ ಪೋರ್ಟೇಶನ್ ತಂತ್ರಜ್ಞಾನ ತರಬೇತಿ ಒಳಗೊಂಡಿರುತ್ತದೆ. ತಾಂತ್ರಿಕ ಬೋಧನೆಯ ಹೊರತಾಗಿ, ಈ ಯೋಜನೆಯು ಉದ್ಯೋಗ ಹೊಂದುವ ಸಾಮರ್ಥ್ಯ ಗಳಿಸಲು ಹೆಚ್ಚಿನ ಒತ್ತು ನೀಡುತ್ತದೆ. ಭಾಗವಹಿಸುವವರಿಗೆ ಕೆಲಸದ ಸ್ಥಳಕ್ಕೆ ಪೂರಕವಾದ ಸಿದ್ಧತೆ, ವೃತ್ತಿಪರ ನಡವಳಿಕೆ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ತಜ್ಞರ ನೇತೃತ್ವದ ತರಬೇತಿ ಮತ್ತು ಪ್ರಾಯೋಗಿಕ ಅನುಭವದ ಮೂಲಕ, ಈ ತರಬೇತಿ ಕಾರ್ಯಕ್ರಮವು ಉದ್ಯಮಕ್ಕೆ ಸಿದ್ಧವಿರುವ ಪ್ರತಿಭೆಗಳ ಸಮೂಹವನ್ನು ನಿರ್ಮಿಸುವ, ಕಾರ್ಯಪಡೆ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಭಾರತದಾದ್ಯಂತ ಇರುವ ಯುವಜನತೆಗೆ ಸುಸ್ಥಿರ ಹಾಗೂ ದೀರ್ಘಕಾಲೀನ ವೃತ್ತಿ ಮಾರ್ಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಶ್ರೀ ಎಂ.ಪಿ. ಸರವಣನ್, ಹಿರಿಯ ನಿರ್ದೇಶಕರು, ಜನರು, ಸಂವಹನ ಮತ್ತು ಸಿಎಸ್ಆರ್, ಕೋನೆ ಎಲಿವೇಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, “ನುರಿತ ಕಾರ್ಯಪಡೆಯನ್ನು ರೂಪಿಸುವುದು ಕೇವಲ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಮಾತ್ರವಲ್ಲ, ಮುಂದಿನ ಪೀಳಿಗೆಯ ಪ್ರತಿಭೆಗಳ ಸಬಲೀಕರಣಕ್ಕೂ ಬಹಳ ಅತ್ಯಗತ್ಯ ಎಂದು ನಾವು ನಂಬುತ್ತೇವೆ. ಇಂತಹ ಯೋಜನೆಗಳು ಮಹತ್ವಾಕಾಂಕ್ಷೆಯುಳ್ಳ ಯುವ ಪ್ರತಿಭೆಗಳಿಗೆ ಪ್ರಾಯೋಗಿಕ ಮತ್ತು ಉದ್ಯಮಕ್ಕೆ ಪೂರಕವಾದ ಕೌಶಲ್ಯಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ ಮತ್ತು ಇದು ಅರ್ಥಪೂರ್ಣ ವೃತ್ತಿಜೀವನದ ಅವಕಾಶಗಳನ್ನು ತೆರೆಯುತ್ತದೆ.
ಇದಕ್ಕೆ ಧ್ವನಿಗೂಡಿಸಿದ ಮಾ ಫೋಯ್ ಫೌಂಡೇಶನ್ನ ಸಿಎಸ್ಆರ್ ಮುಖ್ಯಸ್ಥೆ ಶ್ರೀಮತಿ ರೋವೆನಾ ಸ್ಕರ್ವಿಲ್ ಮಾತನಾಡಿ, “ಕೌಶಲ್ಯಾಭಿವೃದ್ಧಿಯು ಸುಸ್ಥಿರ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಅಡಿಪಾಯವಾಗಿದೆ. ಕೋನೆ ಸಂಸ್ಥೆಯೊಂದಿಗಿನ ಈ ಪಾಲುದಾರಿಕೆಯ ಮೂಲಕ, ಉದ್ಯೋಗ ಆಧಾರಿತ ಕೌಶಲ್ಯ ನೀಡುವಲ್ಲಿನ ನಮ್ಮ ಅನುಭವವನ್ನು ನಾವು ಈ ಕಾರ್ಯಕ್ರಮದಲ್ಲಿ ಬಳಸುತ್ತಿದ್ದೇವೆ. ಇದು ಯುವಕರಿಗೆ ವರ್ಟಿಕಲ್ ಟ್ರಾನ್ಸ್ ಪೋರ್ಟೇಶನ್ನಲ್ಲಿ ತಾಂತ್ರಿಕ ಪರಿಣತಿಯನ್ನು ನೀಡುವುದಲ್ಲದೆ, ಅವರು ಕೆಲಸದ ಸ್ಥಳದಲ್ಲಿ ಅಭಿವೃದ್ಧಿ ಹೊಂದಲು ನೆರವಾಗುತ್ತದೆ.























