Home Advertisement
Home ಸುದ್ದಿ ದೇಶ ರಿಲಯನ್ಸ್ ಸಹಭಾಗಿತ್ವದಲ್ಲಿ ಟೈಮ್ 100 ನೆಕ್ಸ್ಟ್ ಇಂಡಿಯಾ ಬಿಡುಗಡೆ

ರಿಲಯನ್ಸ್ ಸಹಭಾಗಿತ್ವದಲ್ಲಿ ಟೈಮ್ 100 ನೆಕ್ಸ್ಟ್ ಇಂಡಿಯಾ ಬಿಡುಗಡೆ

0
37

ನ್ಯೂಯಾರ್ಕ್ ಮೂಲದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್ ಮತ್ತು ರಿಲಯನ್ಸ್ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಟೈಮ್ 100 ನೆಕ್ಸ್ಟ್ ಇಂಡಿಯಾ ಜಾಗತಿಕ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ಈ ಮೂಲಕ 100 ಭಾರತೀಯ ಮತ್ತು ಜಾಗತಿಕ ಸಾಧಕರನ್ನು ಗುರುತಿಸಿ ಗೌರವಿಸಲಿದೆ.

2026ರ ಡಿಸೆಂಬರ್‌ನಲ್ಲಿ ಮುಂಬಯಿನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸಾಧಕರ ಪಟ್ಟಿ ಬಿಡುಗಡೆಯಾಗಲಿದೆ. ಇದರೊಂದಿಗೆ ಟೈಮ್ 100 ನೆಕ್ಸ್ಟ್‌ನ ಫ್ರಾಂಚೈಸಿಯನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ನ್ಯೂಯಾರ್ಕ್ ನಗರದಲ್ಲಿ ನಡೆದ ಸಮಾರಂಭ ದಲ್ಲಿ ಈ ಬಗ್ಗೆ ಟೈಮ್ ಸಿಇಒ ಜೆಸ್ಸಿಕಾ ಸಿಬ್ಲಿ ಮತ್ತು ರಿಲಯನ್ಸ್ ಫೌಂಡೇಷನ್‌ನ ಸ್ಥಾಪಕರು ಮತ್ತು ಅಧ್ಯಕ್ಷರಾದ ನೀತಾ ಅಂಬಾನಿಯವರು ಘೋಷಿಸಿದರು. ಕಂಪನಿಯ ಪ್ರಕಾರ, ವಿಜ್ಞಾನ, ಉದ್ಯಮ, ಕಲೆ, ಕ್ರೀಡೆ ಮತ್ತು ಅಡ್ವಕಸಿ ವಲಯದ 100 ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು.

ಟೈಮ್ ಸಂಪಾದಕರು ಇದನ್ನು ನಿರ್ವಹಿಸಲಿದ್ದು, ನಂತರ ಮುಂಬಯಿಯಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗುವುದು. ಟೈಮ್ ನೆಕ್ಸ್ಟ್ 100 ಆವೃತ್ತಿಯನ್ನು ಭಾರತಕ್ಕೆ ಮೊದಲ ಬಾರಿಗೆ ತರಲು ಸಂತಸವಾಗುತ್ತಿದೆ ಎಂದು ಟೈಮ್ ಸಿಇಒ ಜೆಸ್ಸಿಕಾ ಸಿಬ್ಲಿ ಹೇಳಿದರು.

ಜಗತ್ತಿನಾದ್ಯಂತ ನಾನಾ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ಗುರುತಿಸಿ ಗೌರವಿಸಲು ನಾವು ಸಿದ್ಧರಿದ್ದು, ಇದನ್ನು ಕಾರ್ಯಗತಗೊಳಿಸಲು ರಿಲಯನ್ಸ್ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಹೇಳಿದರು. ಭಾರತದಲ್ಲಿ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ರಿಲಯನ್ಸ್ ಬದ್ಧವಾಗಿದೆ ಎಂದು ನೀತಾ ಅಂಬಾನಿಯವರು ತಿಳಿಸಿದರು.

ಟೈಮ್‌ನ ಕಾರ್ಯ ನಿರ್ವಾಹಕ ಸಂಪಾದಕ ಡಾನ್ ಮಸ್ಕಾಯ್ ಮಾತನಾಡಿ, ಮುಂಬರುವ ದಶಕದ ಪ್ರತಿಭಾವಂತ ನಾಯಕರನ್ನು ಗುರುತಿಸಲು ಟೈಮ್ ನೆಕ್ಸ್ಟ್ ಪ್ರಬಲ ವೇದಿಕೆಯಾಗಲಿದೆ ಎಂದರು.

ಟೈಮ್ ಸಂಸ್ಥೆಯು 2021 ರಿಂದಲೂ ಟೈಮ್ 100 ಇಂಪಾಕ್ಟ್ ಅವಾರ್ಡ್ ಸಮಾರಂಭವನ್ನು ಐದು ಖಂಡಗಳಲ್ಲಿ ಆಯೋಜಿಸಿದೆ.