Home Advertisement
Home ಸುದ್ದಿ ದೇಶ ತಾಯಿ, ಪತ್ನಿಯನ್ನು ಕೊಂದು, ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

ತಾಯಿ, ಪತ್ನಿಯನ್ನು ಕೊಂದು, ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

0
193

ತಿರುಪತಿ: ತಾಯಿ ಮತ್ತು ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು, ತನ್ನ ಇಬ್ಬರು ಮಕ್ಕಳೊಂದಿಗೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂದ್ರಪ್ರದೇಶದ ತಿರುಪತಿ ಜಿಲ್ಲೆಯ ನಾರಾಯಣವನಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ಮೋಹನ್ ಎಂಬಾತ ಮನೆಯಲ್ಲಿದ್ದ ತನ್ನ ಪತ್ನಿ ಹರಿತಾ (33) ಹಾಗೂ ತಾಯಿ ಚಂದ್ರಕಲಾ (65) ಅವರನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಿರುಪತಿಯ ಪುತ್ತೂರಿನ ಶಾಲೆ ಹೋಗಿದ್ದ ಮಗ ಕೌಶಿಕ್ (14) ಮತ್ತು ಮಗಳು ಹರಿಣಿ (12) ಅವರನ್ನು ಶಾಲೆಯಲ್ಲಿ ಶಿಕ್ಷಕರಿಗೆ ಸಂಬಂಧಿಕರೊಬ್ಬರು ನಿಧನರಾಗಿದ್ದಾರೆಂದು ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದಾನೆ.

ಶಾಲೆಯಿಂದ ಮಕ್ಕಳನ್ನು ನೇರವಾಗಿ ಪುತ್ತೂರು ತಾಲೂಕಿನ ವೇಪಗುಂಟ ಬಳಿಯ ರೈಲ್ವೆ ಹಳಿಯ ಬಳಿ ಕರೆದೊಯ್ದಿದ್ದಾನೆ. ಬಳಿಕ ಅಲ್ಲಿಯೇ ರೈಲು ಹಳಿ ಮೇಲೆ ಮಲಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಮೋಹನ್ ಪತ್ನಿ ಹರಿತಾ ಅವರ ಸಹೋದರ ಇವರೊಂದಿಗೆ ವಾಸವಾಗಿದ್ದು, ಮೋಹನ್‌ಗೆ ಕರೆ ಮಾಡಿದ್ದಾರೆ ಆಗ ಮೋಹನ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.‌ ಇದರಿಂದ ಅನುಮಾನಗೊಂಡು ಮನೆಗೆ ಬಂದಾಗ ಇಬ್ಬರು ಮೃತಪಟ್ಟಿರುವುದನ್ನು ನೋಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಕುರಿತಂತೆ ಪೊಲೀಸರು ಕೊಲೆ ಮತ್ತು ಆತ್ಮಹತ್ಯೆಯ ಹಿಂದಿನ ಉದ್ದೇಶ ಹಾಗೂ ಘಟನೆಗೆ ಕಾರಣವೇನು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.