Home Advertisement
Home ಸುದ್ದಿ ದೇಶ UIDAI ಮೈಲುಗಲ್ಲು: 3 ತಿಂಗಳಲ್ಲಿ 100 OVSE ಘಟಕಗಳ ಸೇರ್ಪಡೆ

UIDAI ಮೈಲುಗಲ್ಲು: 3 ತಿಂಗಳಲ್ಲಿ 100 OVSE ಘಟಕಗಳ ಸೇರ್ಪಡೆ

0
55

ಆಧಾರ್ ಆಫ್‌ಲೈನ್ ಪರಿಶೀಲನೆಗೆ ಭಾರೀ ಸ್ಪಂದನೆ – ಡಿಜಿಟಲ್ ಭಾರತಕ್ಕೆ ಉತ್ತೇಜನ

ನವದೆಹಲಿ: ದೇಶದ ಡಿಜಿಟಲ್ ಗುರುತು ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕೇವಲ ಮೂರು ತಿಂಗಳೊಳಗೆ 100ಕ್ಕೂ ಹೆಚ್ಚು ಘಟಕಗಳನ್ನು ಆಫ್‌ಲೈನ್ ಪರಿಶೀಲನೆ ಹುಡುಕುವ ಘಟಕಗಳಾಗಿ (OVSE) ಸೇರ್ಪಡೆಗೊಳಿಸಿದೆ. ಆಧಾರ್ ಆಫ್‌ಲೈನ್ ಪರಿಶೀಲನಾ ವ್ಯವಸ್ಥೆಯ ವೇಗದ ಸ್ವೀಕೃತಿ ಇದರಿಂದ ಸ್ಪಷ್ಟವಾಗಿದ್ದು, ಡಿಜಿಟಲ್ ಸೇವೆಗಳ ಕ್ಷೇತ್ರದಲ್ಲಿ ಹೊಸ ದಿಕ್ಕು ತೋರಿಸಿದೆ.

ಆಧಾರ್ ಆಫ್‌ಲೈನ್ ಪರಿಶೀಲನೆ ಎಂದರೇನು? : ಆಧಾರ್ ಆಫ್‌ಲೈನ್ ಪರಿಶೀಲನೆ ಎನ್ನುವುದು ಬಳಕೆದಾರರ ಒಪ್ಪಿಗೆ ಆಧಾರಿತ (consent-based), ಸುರಕ್ಷಿತ ಹಾಗೂ ಕಾಗದರಹಿತ ಗುರುತು ದೃಢೀಕರಣ ವ್ಯವಸ್ಥೆ. ಇದರ ಮೂಲಕ ಯಾವುದೇ ಸೇವಾ ಪೂರೈಕೆದಾರರು ಬಳಕೆದಾರರ ಸಂವೇದನಾಶೀಲ ಮಾಹಿತಿಯನ್ನು ನೇರವಾಗಿ ಸಂಗ್ರಹಿಸದೆ, ಸುರಕ್ಷಿತ ರೀತಿಯಲ್ಲಿ ಪರಿಶೀಲನೆ ನಡೆಸಬಹುದು.

ವಿವಿಧ ಕ್ಷೇತ್ರಗಳಿಂದ ಭಾರೀ ಸ್ಪಂದನೆ : ಈ 100 OVSE ಘಟಕಗಳಲ್ಲಿ ವಿವಿಧ ಕ್ಷೇತ್ರಗಳ ಸಂಸ್ಥೆಗಳು ಸೇರಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ಫಿನ್‌ಟೆಕ್ ಕಂಪನಿಗಳು, ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಆತಿಥ್ಯ ಕ್ಷೇತ್ರ, ಶಿಕ್ಷಣ ಹಾಗೂ ಪರೀಕ್ಷಾ ಸಂಸ್ಥೆಗಳು ಹಿನ್ನೆಲೆ ಪರಿಶೀಲನೆ (Background verification) ಸಂಸ್ಥೆಗಳು, ಉದ್ಯೋಗ ಮೌಲ್ಯಮಾಪನ ಕಂಪನಿಗಳು.

ಸೇವಾ ವಿತರಣೆಗೆ ವೇಗ : UIDAI ಪ್ರಕಾರ, ಈ ವ್ಯವಸ್ಥೆಯ ಬಳಕೆಯಿಂದ ಸೇವೆಗಳ ವಿತರಣಾ ಸಮಯ ಕಡಿಮೆಯಾಗಲಿದೆ, ಹಸ್ತಚಾಲಿತ ಪರಿಶೀಲನೆ ಅಗತ್ಯ ಕಡಿಮೆಯಾಗುತ್ತದೆ, ಭೌತಿಕ ದಾಖಲೆಗಳ ನಿರ್ವಹಣೆಯ ವೆಚ್ಚ ಇಳಿಯಲಿದೆ ಅಲ್ಲದೆ ಡಿಜಿಟಲ್ ವ್ಯವಸ್ಥೆಗಳ ಮೇಲೆ ನಂಬಿಕೆ ಹೆಚ್ಚಲಿದೆ.

UIDAI ಈಗ ಇನ್ನಷ್ಟು ಸಂಸ್ಥೆಗಳನ್ನು OVSE ಮಾದರಿಯಲ್ಲಿ ಸೇರಿಸಲು ಮುಂದಾಗಿದ್ದು, ಡಿಜಿಟಲ್ ಭಾರತ ಯೋಜನೆಗೆ ಉತ್ತೇಜನ ನೀಡುವಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ 200 ದಾಟುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

UIDAI ಅಧಿಕಾರಿಗಳು, “ಆಧಾರ್ ಆಫ್‌ಲೈನ್ ಪರಿಶೀಲನೆ ವ್ಯವಸ್ಥೆ ಜನರ ಗೌಪ್ಯತೆಯನ್ನು ಕಾಪಾಡುತ್ತಾ, ಸೇವಾ ಪೂರೈಕೆದಾರರಿಗೆ ವೇಗ ಮತ್ತು ಸುಗಮತೆ ನೀಡುತ್ತಿದೆ” ಎಂದು ತಿಳಿಸಿದ್ದಾರೆ.