Home Advertisement
Home ಸುದ್ದಿ ದೇಶ ಮಹಿಳಾ ಮೀಸಲಾತಿಯ ಹಳೆಯ ಮಸೂದೆ ಮತ್ತೆ ತರಲಿ: ಪ್ರಿಯಾಂಕಾ ಗಾಂಧಿ ಸವಾಲು

ಮಹಿಳಾ ಮೀಸಲಾತಿಯ ಹಳೆಯ ಮಸೂದೆ ಮತ್ತೆ ತರಲಿ: ಪ್ರಿಯಾಂಕಾ ಗಾಂಧಿ ಸವಾಲು

0
95

ನವದೆಹಲಿ: ವಿಶೇಷ ಸಂಸತ್ ಅಧಿವೇಶನದಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾದ ಹಿನ್ನೆಲೆ, ಮಹಿಳಾ ಮೀಸಲಾತಿ ವಿಚಾರ ರಾಜಕೀಯವಾಗಿ ಮತ್ತೆ ಚರ್ಚೆಗೆ ಬಂದಿದೆ. ಈ ಬೆಳವಣಿಗೆಯ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, ಹಳೆಯ ಮಹಿಳಾ ಮೀಸಲಾತಿ ಮಸೂದೆಯನ್ನು ಪುನಃ ಮಂಡಿಸುವಂತೆ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಸೂದೆಗೆ 298 ಮಂದಿ ಬೆಂಬಲ ಸೂಚಿಸಿದರೂ, 230 ಮಂದಿ ವಿರೋಧ ವ್ಯಕ್ತಪಡಿಸಿದರು. ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಎರಡು-ಮೂರಂಚು ಬಹುಮತ ಸಿಗದೆ ಮಸೂದೆ ಸೋಲಾಯಿತು.

“ಸೋಮವಾರವೇ ಮಸೂದೆ ತರಲಿ” – ಪ್ರಿಯಾಂಕಾ ಸವಾಲು : ಸುದ್ದಿಸಂಸ್ಥೆಗಳ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಹಿಂದೆ ಎಲ್ಲಾ ಪಕ್ಷಗಳ ಒಮ್ಮತದಿಂದ ಅಂಗೀಕರಿಸಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಮವಾರವೇ ಮತ್ತೆ ಮಂಡಿಸಲಿ. ಯಾರು ಮಹಿಳಾ ಪರ, ಯಾರು ವಿರೋಧಿ ಎಂಬುದು ದೇಶಕ್ಕೆ ತಿಳಿಯಲಿ. ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಹೇಳಿದ್ದಾರೆ.

ಬಿಜೆಪಿ–ವಿಪಕ್ಷ ವಾಕ್ಸಮರ : ಮಸೂದೆ ಸೋಲಿನ ನಂತರ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ಮುಂದುವರಿದಿದೆ. ಮಹಿಳಾ ಮೀಸಲಾತಿಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಿವೆ.

ಕೇಂದ್ರ ಸರ್ಕಾರ ಈ ವಿಚಾರದ ಮೇಲೆ ಮತ್ತೊಂದು ಚರ್ಚೆ ನಡೆಸುವ ಸಾಧ್ಯತೆ ಇದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲು ಮುಂದಾಗಿವೆ. ಮಹಿಳಾ ಮೀಸಲಾತಿ ಪ್ರಶ್ನೆ ಮುಂದಿನ ಅಧಿವೇಶನದಲ್ಲೂ ಪ್ರಮುಖ ಅಜೆಂಡಾ ಆಗುವ ನಿರೀಕ್ಷೆ

ಮಹಿಳೆಯರಿಗೆ ಸಂಸತ್ ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ನೀಡುವ ಉದ್ದೇಶದಿಂದ ಈ ಮಸೂದೆ ಬಹುಕಾಲದಿಂದ ಚರ್ಚೆಯಲ್ಲಿದೆ. ಆದರೆ ಅನುಷ್ಠಾನ ಮತ್ತು ರಾಜಕೀಯ ಒಮ್ಮತದ ಕೊರತೆಯಿಂದ ಮಸೂದೆ ಮುಂದುವರಿಯುತ್ತಲೇ ಬಂದಿದೆ.