ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಅರವಿಂದನಗರ ಬಡಾವಣೆಯಲ್ಲಿ ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಲಿನ್ಸುಲಾ (Linsula) (22) ಎಂದು ಗುರುತಿಸಲಾಗಿದೆ.
ಯುವತಿ ಸ್ಥಳೀಯ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಹೊರರಾಜ್ಯದಿಂದ ಬಂದು ಜೀವನ ಕಟ್ಟಿಕೊಳ್ಳುವ ಕನಸು ಹೊತ್ತಿದ್ದಳು ಎನ್ನಲಾಗಿದೆ.
ಡೈರಿಯಲ್ಲಿ ಬಹಿರಂಗವಾದ ನೋವು: ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಸಾವಿಗೂ ಮುನ್ನ ಯುವತಿ ತನ್ನ ಡೈರಿಯಲ್ಲಿ ಕೆಲವರ ಹೆಸರುಗಳನ್ನು ಉಲ್ಲೇಖಿಸಿದ್ದಾಳೆ. ವಿಶೇಷವಾಗಿ “ರಾಜೇಶ್” ಮತ್ತು “ತೇಜಸ್” ಎಂಬ ಹೆಸರುಗಳು ದಾಖಲಾಗಿವೆ
ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ
ಯುವತಿ ತನ್ನ ಜೀವನದ ಸಂಕಷ್ಟಗಳು, ಕೆಲಸದ ಒತ್ತಡ ಹಾಗೂ ಅನುಭವಿಸಿದ ಕಿರುಕುಳಗಳ ಬಗ್ಗೆ ವಿವರವಾಗಿ ಡೈರಿಯಲ್ಲಿ ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳ ಆರೋಪ: ದೂರುದಾರ ಲಶಿಲಾ ಇಂಚುಗರ್ ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಇಬ್ಬರು ಯುವಕರು ನಿರಂತರ ಕಿರುಕುಳ ನೀಡುತ್ತಿದ್ದರು ಯುವಕರ ಕಿರುಕುಳದ ನಡುವೆ ಕೆಲಸ ಮುಂದುವರಿಸಿದ್ದರು. ಆದರೆ ಅತೀಯಾದ ಕಿರುಕುಳದಿಂದ ಬದುಕು ಅಂತ್ಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ತನಿಖೆ ಮುಂದುವರಿಕೆ: ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರೇರಣೆ ಸೇರಿದಂತೆ ವಿವಿಧ ಅಂಶಗಳಡಿ ತನಿಖೆ ನಡೆಸುತ್ತಿದ್ದಾರೆ.
ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.






















