Home Advertisement
Home ಆರೋಗ್ಯ IADVL ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್–2026” ಜ. 29 ರಿಂದ

IADVL ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್–2026” ಜ. 29 ರಿಂದ

0
5

ಬೆಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಹಾಗೂ ಕುಷ್ಠರೋಗ ತಜ್ಞರ ಸಂಘ (IADVL) ಆಯೋಜಿಸಿರುವ 54ನೇ ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್ – 2026” ಜ. 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ಅಂಡ್ ಸ್ಪಾಯಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಸಮಾವೇಶವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಮಟ್ಟದ ಈ ವೈಜ್ಞಾನಿಕ ಸಮ್ಮೇಳನದಲ್ಲಿ ಚರ್ಮರೋಗ ಶಾಸ್ತ್ರ, ಲೈಂಗಿಕ ರೋಗ ಶಾಸ್ತ್ರ ಹಾಗೂ ಕುಷ್ಠರೋಗ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸಂಶೋಧನೆಗಳು, ಹೊಸ ಚಿಕಿತ್ಸಾ ವಿಧಾನಗಳು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ನಾವೀನ್ಯತೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ.

ಇದನ್ನೂ ಓದಿ:  ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನ

ಸಮ್ಮೇಳನದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ. ಭಗವಾನ್ ಬಿ.ಸಿ, ಐಎಡಿವಿಎಲ್ ಅಧ್ಯಕ್ಷ ಡಾ. ರಾಜೀವ್ ಶರ್ಮಾ, ಉಪಾಧ್ಯಕ್ಷ ಡಾ. ವಿನಯ್ ಸಿಂಗ್, ಗೌರವ ಕಾರ್ಯದರ್ಶಿ ಡಾ. ಭೂಮೇಶ್ ಕುಮಾರ್, ಸಂಘಟನಾ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಾ. ಆರ್. ರಘುನಾಥ್ ರೆಡ್ಡಿ, ವೈಜ್ಞಾನಿಕ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

“ಚರ್ಮದ ಶಕ್ತೀಕರಣ: ವಿಜ್ಞಾನ, ಅನ್ವಯಿಕೆ, ಸೃಜನಶೀಲತೆ ಮತ್ತು ಒಳಗೊಳ್ಳುವಿಕೆ” ಎಂಬುದು ಡರ್ಮಕಾನ್ – 2026ರ ಕೇಂದ್ರ ವಿಷಯವಾಗಿದ್ದು, ಚರ್ಮರೋಗ ಶಾಸ್ತ್ರದ ಬದಲಾಗುತ್ತಿರುವ ಪಾತ್ರ, ವೈಜ್ಞಾನಿಕ ಶ್ರೇಷ್ಠತೆ, ನಾವೀನ್ಯತೆ ಹಾಗೂ ರೋಗಿ ಕೇಂದ್ರಿತ ಚರ್ಮ ಆರೈಕೆಯನ್ನು ಸಮಾವೇಶ ಹೈಲೈಟ್ ಮಾಡಲಿದೆ.

ಇದನ್ನೂ ಓದಿ:  ಬಸವರಾಜ ಬೊಮ್ಮಾಯಿ 66ನೇ ಜನ್ಮದಿನ: ತಂದೆ ಸಮಾಧಿಗೆ ನಮನ

ಸಮ್ಮೇಳನದಲ್ಲಿ ಸಮಗ್ರ ವೈಜ್ಞಾನಿಕ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು, ಕಾರ್ಯಾಗಾರಗಳು, ಕೇಸ್ ಪ್ರಸ್ತುತೀಕರಣಗಳು ಮತ್ತು ತಾಂತ್ರಿಕ ಪ್ರದರ್ಶನಗಳು ನಡೆಯಲಿದ್ದು, ದೇಶ ಮತ್ತು ವಿದೇಶಗಳಿಂದ ಆಗಮಿಸುವ 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಈ ಪ್ರದೇಶದ ಅತಿದೊಡ್ಡ ಚರ್ಮರೋಗ ಸಮ್ಮೇಳನಗಳಲ್ಲಿ ಒಂದಾಗಿದೆ.

ಬೆಂಗಳೂರಿನ ಪರಿಣಿತ ಚರ್ಮರೋಗ ತಜ್ಞರ ತಂಡ ಈ ಸಮ್ಮೇಳನವನ್ನು ಆಯೋಜಿಸಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ವೈಜ್ಞಾನಿಕ ಸಂಶೋಧನೆಯ ಪ್ರಮುಖ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಚರ್ಮ ಆರೈಕೆ, ಕೂದಲು ಆರೈಕೆ ಹಾಗೂ ಸೌಂದರ್ಯ ಆರೈಕೆಯಲ್ಲಿ ಚರ್ಮರೋಗ ತಜ್ಞರ ಪಾತ್ರ, ನೈಜ ಕೂದಲು ತಜ್ಞರು ಹಾಗೂ ನೈಜ ಸೌಂದರ್ಯ ತಜ್ಞರ ಪಾತ್ರದ ಬಗ್ಗೆ ಸಮಾವೇಶದಲ್ಲಿ ವಿಶೇಷ ಚರ್ಚೆಗಳು ನಡೆಯಲಿವೆ.

Previous articleಬಸವರಾಜ ಬೊಮ್ಮಾಯಿ 66ನೇ ಜನ್ಮದಿನ: ತಂದೆ ಸಮಾಧಿಗೆ ನಮನ
Next articleಮಹಾರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ‘ಅಜಿತ್ ಪವಾರ್’