ಬೆಂಗಳೂರು: 2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದ್ದು, 131 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಒಟ್ಟು ಏಳು ಸಾಧಕರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಗಣರಾಜ್ಯೋತ್ಸವದಂದು ಕೊಡಮಾಡುವ ಪದ್ಮ ಪ್ರಶಸ್ತಿಗೆ ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದ್ದು, ಅಧಿಕೃತ ಘೋಷಣೆ ಮಾಡಿದೆ.
ಕರ್ನಾಟಕದವರಾದ ಶತಾವಧಾನಿ ಡಾ. ಆರ್. ಗಣೇಶ ಅವರನ್ನು ಸೇರಿ ಪದ್ಮ ವಿಭೂಷಣ ಒಟ್ಟು ಐವರು ಸಾಧಕರಿಗೆ ಪದ್ಮವಿಭೂಷಣ, 13 ಜನರಿಗೆ ಪದ್ಮಭೂಷಣ, 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಪದ್ಮಶ್ರೀ ಪ್ರಶಸ್ತಿ ಕರ್ನಾಟಕದ ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಬೆಳಗಾವಿಯವರಾದ ಪ್ರಭಾಕರ ಕೋರೆ, ಮಂಡ್ಯ ಮೂಲದವರಾದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಸಮಾಜ ಸೇವಕಿ ಸುಶೀಲಮ್ಮ, ಅಲರ್ಜಿ ತಜ್ಞೆ ಡಾ. ಶುಭ ವೆಂಕಟೇಶ ಅಯ್ಯಂಗಾರ್, ಟಿಟಿ ಜಗನ್ನಾಥನ್, ಶಶಿಶೇಖರ್ ವೆಂಪಟಿ ಅವರು ಈ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರವಾಗುತ್ತಿದ್ದಾರೆ.









