ಬೆಂಗಳೂರು: ರಾಜ್ಯ ಸರ್ಕಾರ ಕೇವಲ ರಾಜಕಾರಣಕ್ಕಾಗಿ ಮತ್ತು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ರಾಜ್ಯಪಾಲರಿಗೆ ತೋರಿರುವ ಅಗೌರವ. ಅದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದಿನ ರಾಜ್ಯಪಾಲರು ಮೊದಲ ಪುಟ ಕೊನೆ ಪುಟ ಓದದೆ ಇರುವ ಅನೇಕ ಉದಾಹರಣೆಗಳಿವೆ. ರಾಜ್ಯಪಾಲರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಸಂವಿಧಾನಕ್ಕೆ ಹಾಗೂ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಮಾಡಿರುವ ಅವಮಾನ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.
ಅತ್ಯಂತ ಹಿರಿಯ ಶಾಸಕರಾದ ಬಿ.ಕೆ. ಹರಿಪ್ರಸಾದ ಅವರ ವರ್ತನೆ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ವಿರುದ್ಧ ಕ್ರಮ ಜರುಗಿರಸುವುದು ಅತ್ಯಂತ ಅವಶ್ಯಕತೆ ಇದೆ. ಈ ಹಿಂದೆ ಹಂಸರಾಜ ಭಾರದ್ವಾಜ್ ಅವರು ರಾಜ್ಯಪಾಲರಾಗಿದ್ದಾಗ ಹಲವಾರು ವಿಚಾರಗಳಲ್ಲಿ ತಮ್ಮ ಮಿತಿ ಮೀರಿ, ಕಾನೂನು ಮೀರಿ ವರ್ತನೆ ಮಾಡಿರುವ ಉದಾಹರಣೆ ಸಾಕಷ್ಟು ಇವೆ. ರಾಜಭವನ ಕಾಂಗ್ರೆಸ್ ಭವನ ಆಗಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತರೆ ಎಂದು ಪ್ರಶ್ನಿಸಿದ್ದಾರೆ.























