ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನೌಕರ

0
1

ಕಲಬುರಗಿ: ತಹಶೀಲ್ದಾರರು ನಡೆಸಿದ ಸಿವಿಲ್ ವ್ಯಾಜ್ಯದ ಆದೇಶ ಪ್ರತಿ ನೀಡಲು ಹತ್ತು ಸಾವಿರ ರೂ. ಲಂಚ ಕೇಳಿ ಪಡೆದುಕೊಂಡ ಕಮಲಾಪುರ ತಹಶೀಲ್ದಾರ್ ಕಚೇರಿ ಎಫ್‌ಡಿಎ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.‌

ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ ರವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ತನಿಖಾಧಿಕಾರಿ, ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಹಶೀಲ್ದಾರ್‌ ಕಚೇರಿಯ ಎಫ್‌ಡಿಎ ಶಶಿಕಾಂತ ಜಂಜೀರ್ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾನೆ.

ಕಮಲಾಪುರ ತಾಲ್ಲೂಕಿನ ಕವನಳ್ಳಿ ತಾಂಡಾದ ದೂರುದಾರ ಕಿಶನ್ ರಾಠೋಡ್ ಅವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ರೂ. 10,000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ತನಿಖೆಯ ನಂತರ ನ್ಯಾಯಾಲಯ ಬಂಧನಕ್ಕೊಪ್ಪಿಸಲಾಗಿದೆ.

Previous articleವಿಬಿ-ಜಿ ರಾಮ್‌ಜಿ ಕಾಯ್ದೆ ವಿರುದ್ಧ ಕೂಲಿ ಕಾರ್ಮಿಕರ ಪ್ರತಿಭಟನೆ