Home ನಮ್ಮ ಜಿಲ್ಲೆ ಉತ್ತರ ಕನ್ನಡ ಭಾರತೀಯ ನೌಕಾಪಡೆಗೆ ‘ಬಾರ್ಡರ್-2’ ಚಿತ್ರತಂಡದ ವಿಶೇಷ ಗೌರವ

ಭಾರತೀಯ ನೌಕಾಪಡೆಗೆ ‘ಬಾರ್ಡರ್-2’ ಚಿತ್ರತಂಡದ ವಿಶೇಷ ಗೌರವ

0
21

INS ವಿಕ್ರಾಂತ್ ಮೇಲೆ ನಡೆದ ಕಾರ್ಯಕ್ರಮ – ನೌಕಾ ಸಿಬ್ಬಂದಿಗೆ ಟ್ರೇಲರ್ ಪ್ರದರ್ಶನ

ಕಾರವಾರ (ಕದಂಬ ನೌಕಾನೆಲೆ): ಬಹುನಿರೀಕ್ಷಿತ ಬಾಲಿವುಡ್ ಚಿತ್ರ ‘ಬಾರ್ಡರ್-2’ ಚಿತ್ರತಂಡವು ಬುಧವಾರ ಸಂಜೆ ದೇಶದ ಏಷ್ಯಾದ ಅತಿದೊಡ್ಡ ನೌಕಾನೆಲೆಯಾದ ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿ, ಭಾರತೀಯ ನೌಕಾಪಡೆಗೆ ವಿಶೇಷ ಗೌರವ ಸಲ್ಲಿಸಿತು. ಅತ್ಯಂತ ಗೌಪ್ಯವಾಗಿ ನಡೆದ ಈ ಕಾರ್ಯಕ್ರಮದ ಮಾಹಿತಿ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

INS ವಿಕ್ರಾಂತ್ ಮೇಲೆ ವಿಶೇಷ ಕಾರ್ಯಕ್ರಮ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧನೌಕೆಯಾದ ಐಎನ್‌ಎಸ್ ವಿಕ್ರಾಂತ್ ಮೇಲೆ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ನಟರಾದ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಹಾಗೂ ಅಹಾನ್ ಶೆಟ್ಟಿ ಅವರು ಭಾಗವಹಿಸಿ, ನೌಕಾಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ:  ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ

ನೌಕಾಪಡೆಯ ಅಪ್ರತಿಮ ಸೇವೆ, ಶೌರ್ಯ ಮತ್ತು ದೇಶಕ್ಕಾಗಿ ಸಲ್ಲಿಸುತ್ತಿರುವ ತ್ಯಾಗಕ್ಕೆ ಚಿತ್ರತಂಡವು ಈ ಮೂಲಕ ಕೃತಜ್ಞತೆ ಸಲ್ಲಿಸಿತು. ಇದಕ್ಕೂ ಮುನ್ನ ‘ಬಾರ್ಡರ್-2’ ತಂಡವು ಮತ್ತೊಂದು ಪ್ರಮುಖ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಮಾದಿತ್ಯಗೂ ಭೇಟಿ ನೀಡಿತ್ತು ಎಂಬುದು ಗಮನಾರ್ಹ.

ಹಾಡುಗಳು ಮತ್ತು ಟ್ರೇಲರ್ ಪ್ರದರ್ಶನ: ಈ ಗೌರವ ಸಮಾರಂಭದ ವೇಳೆ ಚಿತ್ರದ ಕೆಲವು ದೇಶಭಕ್ತಿ ಗೀತಗಳನ್ನು ಪ್ರದರ್ಶಿಸಲಾಯಿತು. ಜೊತೆಗೆ ನೌಕಾ ಸಿಬ್ಬಂದಿಗಳಿಗಾಗಿ ‘ಬಾರ್ಡರ್-2’ ಚಿತ್ರದ ಟ್ರೇಲರ್ ಅನ್ನು ವಿಶೇಷ ಪ್ರದರ್ಶನದ ಮೂಲಕ ಬಿಡುಗಡೆ ಮಾಡಲಾಯಿತು. ದೇಶದ ರಕ್ಷಣಾ ಪಡೆಗಳಿಗೆ ಮೀಸಲಾದ ಈ ವಿಶೇಷ ಪ್ರದರ್ಶನವು ನೌಕಾ ಸಿಬ್ಬಂದಿಯಲ್ಲಿ ಭಾರೀ ಉತ್ಸಾಹ ಮೂಡಿಸಿತು.

ಇದನ್ನೂ ಓದಿ:  ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?

ನೌಕಾ ಅಧಿಕಾರಿಯ ಪಾತ್ರದಲ್ಲಿ ಅಹಾನ್ ಶೆಟ್ಟಿ: ಈ ಚಿತ್ರದಲ್ಲಿ ನಟ ಅಹಾನ್ ಶೆಟ್ಟಿ ಅವರು ಧೈರ್ಯಶಾಲಿ ಭಾರತೀಯ ನೌಕಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕರಾದ ಭೂಷಣ್ ಕುಮಾರ್, ಕೃಷನ್ ಕುಮಾರ್, ಜೆ.ಪಿ. ದತ್ತಾ, ನಿಧಿ ದತ್ತಾ ಹಾಗೂ ನಿರ್ದೇಶಕ ಅನುರಾಗ್ ಸಿಂಗ್ ಕೂಡ ಉಪಸ್ಥಿತರಿದ್ದರು.

ದೇಶಪ್ರೇಮದ ಸಂದೇಶ ಹೊತ್ತ ‘ಬಾರ್ಡರ್-2’: ದೇಶಪ್ರೇಮ, ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಸಾರುವ ‘ಬಾರ್ಡರ್-2’ ಚಿತ್ರವು ಜನವರಿ 23, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಏಷ್ಯಾದ ಅತಿದೊಡ್ಡ ನೌಕಾನೆಲೆಯಲ್ಲಿ ನಡೆದ ಈ ವಿಶಿಷ್ಟ ಪ್ರಚಾರ ಕಾರ್ಯಕ್ರಮವು ಸಿನಿಮಾ ವಲಯದ ಜೊತೆಗೆ ರಕ್ಷಣಾ ಕ್ಷೇತ್ರದಲ್ಲೂ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.