ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು

0
4

ಅರ್ಜುನ್ ಜನ್ಯ-ವಿಜಯಪ್ರಕಾಶ್ ಜೋಡಿಯ ಮೆಲೋಡಿ

ಬೆಂಗಳೂರು: ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ರಕ್ಕಸಪುರದೋಳ್’ ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿನಿರಸಿಕರ ಗಮನ ಸೆಳೆದಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ‘ನೀನಾ ನೀನಾ… ನೀನೇನಾ…’ ಎಂಬ ಅಪ್ಪಟ ಮೆಲೋಡಿ ಗೀತೆ ಶ್ರೋತೃಗಳ ಮನಸ್ಸು ಗೆಲ್ಲುತ್ತಿದೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಜನಪ್ರಿಯ ಗಾಯಕ ವಿಜಯ ಪ್ರಕಾಶ್ ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದಾರೆ. ಮೃದುವಾದ ಸಂಗೀತ, ಹೃದಯಸ್ಪರ್ಶಿ ಸಾಹಿತ್ಯ ಮತ್ತು ಭಾವನಾತ್ಮಕ ನಿರೂಪಣೆಯ ಮೂಲಕ ಈ ಗೀತೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:  ಧಾರವಾಡದ ಜನರೆದುರು ‘ಲ್ಯಾಂಡ್ ಲಾರ್ಡ್’ ಗಾನಾಬಜಾನಾ

ಈ ಹಾಡಿಗೆ ಸಾಹಿತ್ಯವನ್ನು ಮಂಜುನಾಥ್ ಬಿ.ಎಸ್ ರಚಿಸಿದ್ದು, ಅವರು ಈ ಹಿಂದೆ ‘ಎದೆಬಡಿತ ಜೋರಾಗಿದೆ’, ‘ಕೆ.ಡಿ’ ಚಿತ್ರದ ‘ಅಣ್ತಮ್ಮ ಜೋಡೆತ್ತು ಕಣೋ…’ ಸೇರಿದಂತೆ ಹಲವಾರು ಜನಪ್ರಿಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ‘ರಕ್ಕಸಪುರದೋಳ್’ ಚಿತ್ರದ ಮೊದಲ ಗೀತೆಯಾಗಿ ಈ ಹಾಡು ಚಿತ್ರದ ಭಾವನಾತ್ಮಕ ಆಳವನ್ನು ಪ್ರತಿಬಿಂಬಿಸುತ್ತದೆ.

ಹಾಡಿನ ದೃಶ್ಯಗಳಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ಬೇಬಿ ನಿಶಾ (ಗೊಂಬೆ) ಕಾಣಿಸಿಕೊಂಡಿದ್ದು, ಅವರ ಅಭಿನಯ ಗೀತೆಗೆ ಇನ್ನಷ್ಟು ಭಾವ ತುಂಬಿದೆ.

ಈ ಚಿತ್ರಕ್ಕೆ ಕಳೆದ ಒಂದು ದಶಕದಿಂದ ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗೆ ಕಾರ್ಯನಿರ್ವಹಿಸಿರುವ ರವಿ ಸಾರಂಗ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವು ಕ್ರೈಂ–ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಕೊಳ್ಳೇಗಾಲ ಸುತ್ತಮುತ್ತ ನಡೆಯುವ ಕಥೆ ಎಂದು ನಿರ್ದೇಶಕ ರವಿ ಸಾರಂಗ ತಿಳಿಸಿದ್ದಾರೆ.

ಇದನ್ನೂ ಓದಿ:  ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ

“ಇದು ಎಲ್ಲರೊಳಗಿರುವ ರಾಕ್ಷಸರ ಕುರಿತ ಕಥೆ. ಮನುಷ್ಯನಲ್ಲಿ ಎರಡು ಗುಣಗಳಿರುತ್ತವೆ — ಒಂದು ಒಳ್ಳೆಯದು, ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣವನ್ನೇ ‘ರಕ್ಕಸ’ ಎಂದು ಹೇಳಬಹುದು. ಆ ರಕ್ಕಸವನ್ನು ನಾಯಕ ಹೇಗೆ ಮೀರುತ್ತಾನೆ ಎಂಬುದೇ ಚಿತ್ರದ ಕಥೆ” ಎಂದು ನಿರ್ದೇಶಕರು ವಿವರಿಸಿದ್ದಾರೆ.

ಫೆಬ್ರವರಿ 6ರಂದು ‘ರಕ್ಕಸಪುರದೋಳ್’ ಸಿನಿಮಾ ತೆರೆಕಾಣಲಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.

ಕೆ.ಎನ್. ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಕೆ. ರವಿವರ್ಮ ನಿರ್ಮಾಪಕರಾಗಿದ್ದಾರೆ. ರಾಜ್ ಬಿ. ಶೆಟ್ಟಿ ಜೋಡಿಯಾಗಿ ಸ್ವಾತಿಷ್ಟ ಕೃಷ್ಣ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು

ಚಿತ್ರದ ತಾರಾಗಣದಲ್ಲಿ ಬಿ. ಸುರೇಶ್, ಅನಿರುದ್ಧ ಭಟ್, ಗೋಪಾಲ್ ದೇಶಪಾಂಡೆ, ಜಹಾಂಗೀರ್, ಗೌರವ್ ಶೆಟ್ಟಿ, ಸಿದ್ದಣ್ಣ ಸೇರಿದಂತೆ ಹಲವು ಪ್ರಮುಖ ಕಲಾವಿದರು ಇದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಇದ್ದು, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಹಾಡುಗಳಿಗೆ ಮಂಜುನಾಥ್ ಬಿ.ಎಸ್, ಕ್ರಾಂತಿ ಕುಮಾರ್, ದೇವರಾಜ್ ಸುಲೋಕ್, ಭರತ್ ಎಲ್ ಸಾಹಿತ್ಯ ಒದಗಿಸಿದ್ದಾರೆ.

Previous articleದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ