Home ಕ್ರೀಡೆ WPL : ಇಂದು ಚಾಂಪಿಯನ್‌ಗಳ ಕದನ – MI vs RCB

WPL : ಇಂದು ಚಾಂಪಿಯನ್‌ಗಳ ಕದನ – MI vs RCB

0
31

ನವಿ ಮುಂಬೈ: ಮಹಿಳಾ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಆಕಾಶಕ್ಕೇರಿಸಿರುವ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL) ಇಂದು ಭರ್ಜರಿಯಾಗಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲೇ ಟೂರ್ನಿಯ ಎರಡು ಬಲಿಷ್ಠ ಹಾಗೂ ಚಾಂಪಿಯನ್ ತಂಡಗಳಾದ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಈ ಪಂದ್ಯವು ವಿಶೇಷವಾಗಿರುವುದಕ್ಕೆ ಕಾರಣ, ಎರಡೂ ತಂಡಗಳ ನಾಯಕಿಯರೂ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ–ಉಪನಾಯಕಿಯರಾಗಿರುವುದು. ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್‌ಪ್ರೀತ್ ಕೌರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸ್ಮೃತಿ ಮಂಧಾನ ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಹಬ್ಬ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಸೀಸನ್‌ಗೆ ಕ್ಷಣಗಣನೆ ವಿಡಿಯೋ ನೋಡಿ: MI vs RCB – WPL 2026 Blockbuster Match!

ಮುಂಬೈ ಇಂಡಿಯನ್ಸ್‌ಗೆ ಚಾಂಪಿಯನ್ ಅನುಭವದ ಬಲ: ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ಎರಡು ಬಾರಿ WPL ಚಾಂಪಿಯನ್ ಆಗಿರುವ ಅನುಭವವನ್ನು ಹೊಂದಿದ್ದು, ಸಮತೋಲನದ ಹಾಗೂ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರ ವಾಪಸ್ಸು ತಂಡಕ್ಕೆ ದೊಡ್ಡ ಶಕ್ತಿ ತಂದಿದೆ.

ಇನ್ನು ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ ಅವರ ಡೈನಾಮಿಕ್ ಆಟ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅನುಭವ ಹಾಗೂ ಕಾರ್ಯತಂತ್ರದ ಚಾತುರ್ಯ, ಮುಂಬೈ ತಂಡವನ್ನು ಮತ್ತಷ್ಟು ಅಪಾಯಕಾರಿಯಾಗಿ ಮಾಡಿದೆ. ಹೀಗಾಗಿ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಕಠಿಣ ಸವಾಲು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’  (ಗಿಲ್ಲಿ ದಾಖಲೆಯ ಫಾಲೋವರ್ಸ್‌ವಿಡಿಯೋ ನೋಡಿ)

ಹೊಸ ಉತ್ಸಾಹದೊಂದಿಗೆ RCB: ಇನ್ನೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಮುಂಬೈಗಿಂತ ಕಡಿಮೆ ಏನಿಲ್ಲ. ನಾಯಕಿ ಸ್ಮೃತಿ ಮಂಧಾನ ಈ ಬಾರಿ ಹೊಸ ಸಂಯೋಜನೆಯ ತಂಡದೊಂದಿಗೆ ಚಾಂಪಿಯನ್ ಪಟ್ಟಕ್ಕೇರಲು ಮೊದಲ ಹೆಜ್ಜೆಯನ್ನಿಡುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಆರ್‌ಸಿಬಿ ಬಲಿಷ್ಠವಾಗಿದ್ದರೂ, ತಂಡದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿರುವುದು ಮುಂಬೈಗೆ ಲಾಭವಾಗಬಹುದು ಎನ್ನಲಾಗಿದೆ.

ಪರಸ್ಪರ ಪೈಪೋಟಿಯ ಅಂಕಿಅಂಶಗಳು: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪೈಪೋಟಿ ಅತ್ಯಂತ ರೋಚಕವಾಗಿಯೇ ರೂಪುಗೊಂಡಿದೆ. ಇದುವರೆಗೆ ಎರಡೂ ತಂಡಗಳು ಒಟ್ಟು 7 ಬಾರಿ ಪರಸ್ಪರ ಎದುರಾಳಿಗಳಾಗಿದ್ದು, ಮುಂಬೈ ಇಂಡಿಯನ್ಸ್ – 4 ಗೆಲುವು ಕಂಡಿವೆ. ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು – 3 ಗೆಲುವು ಸಾಧಿಸಿದ್ದು, ಮುಂಬೈ ಅಲ್ಪ ಮುನ್ನಡೆಯಲ್ಲಿದೆ.

ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್‍: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?

ಪಿಚ್ ವರದಿ – ರನ್‌ ಮಳೆಯ ನಿರೀಕ್ಷೆ: ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಚ್ ಬ್ಯಾಟರ್‌ಗಳ ಸ್ವರ್ಗ ಎಂದೇ ಗುರುತಿಸಿಕೊಂಡಿದೆ. ಉತ್ತಮ ಬೌನ್ಸ್ ಹಾಗೂ ಸಮನಾದ ವೇಗಕ್ಕೆ ಹೆಸರುವಾಸಿಯಾದ ಈ ಪಿಚ್‌ನಲ್ಲಿ ರನ್‌ಮಳೆ ಸುರಿಯುವ ನಿರೀಕ್ಷೆ ವ್ಯಕ್ತವಾಗಿದೆ.

ಉದ್ಘಾಟನಾ ಸಮಾರಂಭಕ್ಕೂ ಸಿದ್ಧತೆ: ಪಂದ್ಯಕ್ಕೂ ಮುನ್ನ ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭವೂ ನಡೆಯಲಿದ್ದು, ಬಾಲಿವುಡ್ ಗಾಯಕ ಯೋ-ಯೋ ಹನಿ ಸಿಂಗ್ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಪ್ರದರ್ಶನಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಉದ್ಘಾಟನಾ ಸಮಾರಂಭ ಸಂಜೆ 6.30ಕ್ಕೆ ಆರಂಭವಾಗಲಿದೆ.