ಜಯಮಾಲಾ, ಸಾ.ರಾ. ಗೋವಿಂದ್‌ಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿ

0
1

ಬೆಂಗಳೂರು: 2020 ಹಾಗೂ 2021ನೇ ಸಾಲಿನ ಡಾ. ರಾಜ್‌ಕುಮಾರ್‌ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಪ್ರಕಟ ಮಾಡಿದೆ.

2020ರ ಸಾಲಿನ ಜೀವಮಾನ ಸಾಧನೆಯ ಡಾ. ರಾಜ್‌ಕುಮಾರ್‌ ಪ್ರಶಸ್ತಿಗೆ ಹಿರಿಯ ನಟಿ ಡಾ. ಜಯಮಾಲಾ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಂ.ಎಸ್‌. ಸತ್ಯು ಹಾಗೂ ಡಾ. ವಿಷ್ಣುವರ್ಧನ ಪ್ರಶಸ್ತಿಗೆ ಛಾಯಾಗ್ರಾಹಕರಾದ ಶ್ರೀ ಪ್ರಗತಿ ಅಶ್ವಥ್ ನಾರಾಯಣ್ ಭಾಜನರಾಗಿದ್ದಾರೆ.

ಇದನ್ನೂ ಓದಿ: Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’

2021ರ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದ್‌, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ನಿರ್ದೇಶಕ ಕೆ. ಶಿವರುದ್ರಯ್ಯ ಮತ್ತು ಡಾ. ವಿಷ್ಣುವರ್ಧನ ಪ್ರಶಸ್ತಿಗೆ ಹಿರಿಯ ನಟ ಎಂ.ಕೆ. ಸುಂದರ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

2020 ಮತ್ತು 2021ನೇ ಸಾಲಿನ ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್‌ ಹಾಗೂ ಡಾ. ವಿಷ್ಣುವರ್ಧನ್‌ ಮೂರು ಪ್ರಶಸ್ತಿ ಘೋಷಿಸಲಾಗಿದ್ದು, ಈ ಎಲ್ಲ ಪ್ರಶಸ್ತಿಗಳು ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿವೆ.

Previous articleಪೊಲೀಸ್‌ ಠಾಣೆಯಲ್ಲಿಯೇ ಮುಖ್ಯ ಪೇದೆ ಆತ್ಮಹತ್ಯೆ