ಹೊಸ ವರ್ಷದ ಸಂಭ್ರಮ: ಮಂತ್ರಾಲಯಕ್ಕೆ ಹರಿದುಬಂದ ಭಕ್ತಸಾಗರ

0
4

ರಾಯಚೂರು: ಹೊಸ ವರ್ಷ ಮೊದಲ ದಿನ ಗುರುವಾರ ಬಂದ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು.

ಶ್ರೀರಾಘವೇಂದ್ರ ಸ್ವಾಮಿಗಳವರ ವಾರ ಗುರುವಾರವೇ ವರ್ಷ ಮೊದಲ ದಿನ ಬಂದ ಹಿನ್ನೆಲೆ ಪ್ರತಿ ವರ್ಷಕ್ಕಿಂತಲೂ ಎರಡುಪಟ್ಟು ಭಕ್ತರಿಂದ ಮಂತ್ರಾಲಯವೇ ತುಂಬಿ ತುಳುಕುತ್ತಿತು.

ಬೆಳಿಗ್ಗೆ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಮಠದ ಎಲ್ಲ ದ್ವಾರಗಳ ಮೂಲಕ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: 2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ

ಹೊಸ ವರ್ಷದ ಆರಂಭದ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದು ಗುರುರಾಯರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮಠದ ಕೊಠಡಿ, ಪ್ರಸಾದ ವ್ಯವಸ್ಥೆಯಲ್ಲಿ ವ್ಯತ್ಯಯವಾಗುತ್ತಿತ್ತು.

ದೇಶ, ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದು, ರಾಯರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದು, ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಯುಬೇಕಾಗಿತ್ತು.

ಹೊಸವರ್ಷದ ಮೊದಲನೇ ದಿನ ರಾಘವೇಂದ್ರ ಸ್ವಾಮಿಗಳ ಅನುಗ್ರಹವಾದರೆ, ಇಡೀ ವರ್ಷವೂ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರ ಪ್ರಮಾಣ ಹೆಚ್ಚಾಗಿದೆ. ಪ್ರತಿವರ್ಷಗಿಂತ ಈ ವರ್ಷವೂ ಭಕ್ತರು ಸಂಖ್ಯೆಯೂ ಹೆಚ್ಚಾಗಿದೆ ಎಂದು ಶ್ರೀಮಠದ ಅಧಿಕಾರಿಗಳು ತಿಳಿಸಿದ್ದಾರೆ.

Previous articleವಿಜಯಪುರ ಪ್ರತಿಭಟನೆ: ಸ್ವಾಮೀಜಿ ಸೇರಿ 20ಕ್ಕೂ ಹೆಚ್ಚು ಜನರು ವಶಕ್ಕೆ