Home ಸುದ್ದಿ ರಾಜ್ಯ ಹೊಸ ವರ್ಷದ ಮುನ್ನಾದಿನವೇ ಹಲವು ಐಎಎಸ್‌ ಅಧಿಕಾರಿಗಳಿಗೆ ಬಡ್ತಿ

ಹೊಸ ವರ್ಷದ ಮುನ್ನಾದಿನವೇ ಹಲವು ಐಎಎಸ್‌ ಅಧಿಕಾರಿಗಳಿಗೆ ಬಡ್ತಿ

0
17

ಬೆಂಗಳೂರು: ಹೊಸ ವರ್ಷದ ಮುನ್ನಾದಿನವೇ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ಬಡ್ತಿ ನೀಡಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ನಾಲ್ವರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಅಧಿಕಾರಿಗಳ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಶುಭಾಶಯ ಬಂದಿದ್ರೆ ಹುಷಾರ್‌! ಕ್ಲಿಕ್‌ ಮಾಡಬೇಡಿ!!

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರಕ್ಕೆ ಹೊಸ ಜಿಲ್ಲಾಧಿಕಾರಿಗಳ ನೇಮಕವಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ವರ್ಗ ಮಾಡಲಾಗಿದ್ದು ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ನಿಯೋಜಿಸಿಲ್ಲ.

ಒಟ್ಟಾರೆ 19 ಐಎಎಸ್‌ ಅಧಿಕಾರಿಗಳು, 20 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, 66 ಐಎಎಸ್‌ ಅಧಿಕಾರಿಗಳು, 23 ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ವರ್ಗಾವಣೆಯಲ್ಲಿ 10 ಜನರಿಗೆ ಯಾವುದೇ ಹುದ್ದೆಯನ್ನು ನಿಯೋಜನೆ ಮಾಡಿಲ್ಲ. ಕನಗವಲ್ಲಿ ಎಂ, ಶಿವಕುಮಾರ್ ಕೆಬಿ, ರವೀಂದ್ರ ಪಿಎನ್‌, ಶ್ರೀರೂಪಾ, ವಿನೋಂತಾ ಪ್ರಿಯಾ, ವಿವಿ ಜೋತ್ಸ್ನಾ, ಮುಲೈ ಮುಹಿಲನ್, ಗಿರೀಶ್‌ ಆರ್‌, ಸೋಮಶೇಖರ್ ಎಸ್‌ಜೆ, ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಕಾಯ್ದಿರಿಸಲಾಗಿದೆ.