ವಿಂಕ್ ವರ್ಕ್ಸ್ ಮೀಡಿಯಾದಿಂದ ಮಹಿಳಾ ಕ್ರೀಡಾ ಮಹೋತ್ಸವ ಘೋಷಣೆ: ರಿಯಲ್ ಸ್ಟಾರ್ ಉಪೇಂದ್ರರಿಂದ ಅಧಿಕೃತ ಅನಾವರಣ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳು ನಟನೆಯ ಜತೆಗೆ ಕ್ರೀಡೆ ಮತ್ತು ಕ್ರೀಡೋತ್ಸವಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಮಹಿಳೆಯರ ಕ್ರೀಡಾ ಪ್ರತಿಭೆ ಹಾಗೂ ಉತ್ಸಾಹವನ್ನು ಉತ್ತೇಜಿಸುವ ಉದ್ದೇಶದಿಂದ ವಿಂಕ್ ವರ್ಕ್ಸ್ ಮೀಡಿಯಾ ಸಂಸ್ಥೆ 2025–2026ನೇ ಸಾಲಿನ ತನ್ನ ವಾರ್ಷಿಕ ಕಾರ್ಯಕ್ರಮಗಳ ಭಾಗವಾಗಿ ಮಹಿಳಾ ಕ್ರೀಡಾ ಮಹೋತ್ಸವವನ್ನು ಘೋಷಿಸಿದೆ.
ಈ ಮಹತ್ವದ ಕಾರ್ಯಕ್ರಮವನ್ನು ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಳಿಸಿದರು. ಮಹಿಳೆಯರಿಗಾಗಿ ವಿಶೇಷವಾಗಿ ರೂಪುಗೊಂಡಿರುವ ಈ ಕ್ರೀಡಾ ಮಹೋತ್ಸವ, ಮಹಿಳಾ ಸಬಲಿಕರಣ ಮತ್ತು ಸಮಾನ ಅವಕಾಶಗಳ ಸೃಷ್ಟಿಯತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಮಹಿಳೆಯರ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ನಾಯಕತ್ವವನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕ್ರೀಡೋತ್ಸವವನ್ನು ವಿನ್ಯಾಸಗೊಳಿಸಲಾಗಿದ್ದು, ಕೇವಲ ಸ್ಪರ್ಧೆಯಷ್ಟೇ ಅಲ್ಲದೆ ಪ್ರೇರಣೆ ಮತ್ತು ಶಕ್ತೀಕರಣದ ವೇದಿಕೆಯಾಗಿ ಇದು ರೂಪುಗೊಳ್ಳಲಿದೆ.
ಈ ಮಹೋತ್ಸವದಲ್ಲಿ ಚಿತ್ರರಂಗದ ಮಹಿಳಾ ಕಲಾವಿದರು. ಮಾಧ್ಯಮ ವೃತ್ತಿಪರರು. ಮಾಡೆಲ್‌ಗಳು. ಸಾಮಾಜಿಕ ಜಾಲತಾಣದ ಇನ್‌ಫ್ಲೂಯೆನ್ಸರ್‌ಗಳು. ವಿವಿಧ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡ ಮಹಿಳೆಯರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ರಗಡ್ ಲುಕ್‌ನಲ್ಲಿ ರಾಜ್ ಬಿ. ಶೆಟ್ಟಿ: ‘ರಕ್ಕಸಪುರದೋಳ್’ ಮೊದಲ ಝಲಕ್
ಕಾರ್ಯಕ್ರಮದ ಪ್ರಮುಖ ಸಂಘಟಕರಾಗಿ ದಿವ್ಯ ಉರುಡುಗ, ನಿಕಿತಾ ಸ್ವಾಮಿ ಮತ್ತು ಮಂಜುನಾಥ ರಾಧಾಕೃಷ್ಣ ಕಾರ್ಯ ನಿರ್ವಹಿಸುತ್ತಿದ್ದು, ರಾಗಶ್ರೀ ಬಿ.ಜಿ, ಕಾವ್ಯಾ ಆರ್ ಮತ್ತು ಗೌರವ್ ಉಪ ಸಂಘಟಕರಾಗಿ ಸಹಕಾರ ನೀಡುತ್ತಿದ್ದಾರೆ.
ಮಹಿಳೆಯರಿಗೆ ಕ್ರೀಡೆಯಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಲು ಹಾಗೂ ಆತ್ಮವಿಶ್ವಾಸದಿಂದ ಮುಂದೆ ಬರಲು ಈ ಮಹಿಳಾ ಕ್ರೀಡಾ ಮಹೋತ್ಸವ ಒಂದು ಹೊಸ ಅಧ್ಯಾಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.























