ಬಳ್ಳಾರಿ: ಅಲ್ಲಿಪುರ ಶಂಕರಪ್ಪತಾತನ ದೇವಸ್ಥಾನಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವುದಾಗಿ ನಂಬಿಸಿ, ತಂದೆಯೇ ಇಬ್ಬರು ಹೆಣ್ಣುಮಕ್ಕಳನ್ನು ಕಾಲುವೆಗೆ ತಳ್ಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಂಧ್ರದ ಬೊಮ್ಮನಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ ಆರೋಪಿ. ಮಕ್ಕಳನ್ನು ಅನಸೂಯ (9) ಮತ್ತು ಸಿಂಧು (11) ಎಂದು ಗುರುತಿಸಲಾಗಿದೆ. ಡಿ. 21ರಂದು ಸಿರಗುಪ್ಪ ಬಳಿಯ ಎಲ್‌ಎಲ್‌ಸಿ ಕಾಲುವೆಗೆ ಮಕ್ಕಳು ಎಸೆದು, ಕಲ್ಲಪ್ಪ ಒಬ್ಬನೇ ಊರಿಗೆ ಮರಳಿದ್ದ.
ಮಕ್ಕಳ ಬಗ್ಗೆ ಸರಿಯಾಗಿ ಪತ್ನಿಗೆ ಮಾಹಿತಿ ನೀಡಿಲ್ಲ. ಅನುಮಾನಗೊಂಡ ಪತ್ನಿ ಹಾಗೂ ಕುಟುಂಬಸ್ಥರು ಠಾಣೆಗೆ ದೂರು ನೀಡಿದ್ದಾರೆ. ಇಬ್ಬರು ಬಾಲಕಿಯರಲ್ಲಿ ಒಬ್ಬ ಬಾಲಕಿ ಅನುಸೂಯ ಶವ ಸಿರಿಗೇರಿ ಕ್ರಾಸ್ ಬಳಿ ಕಾಲುವೆ ಬಳಿ ಮಂಗಳವಾರ ಪತ್ತೆಯಾಗಿದೆ. ಮತ್ತೊಬ್ಬ ಬಾಲಕಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಆಂಧ್ರದ ಬೊಮ್ಮನಹಾಳ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























