ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಟ್ರುಝೋನ್ ಸೋಲಾರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸನ್‌ಟೆಕ್ ಎನರ್ಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ದೀರ್ಘಾವಧಿಯ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ಈ ಪಾಲುದಾರಿಕೆಯು ಟ್ರುಜನ್ ಸೋಲಾರ್‌ನ ಬೆಳವಣಿಗೆಯಲ್ಲಿ ನಿರ್ಣಾಯಕ ಮೈಲಿಗಲ್ಲಾಗಿದ್ದು, ತನ್ನ ವಿಸ್ತರಣಾ ಯೋಜನೆಗಳನ್ನು ಬೆಂಬಲಿಸುತ್ತದೆ. 2030ರ ವೇಳೆಗೆ ಭಾರತದ ಅಗ್ರ ಸೌರ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಕಂಪನಿಗಳಲ್ಲಿ ಒಂದಾಗುವ ಮಹತ್ವಾಕಾಂಕ್ಷೆಗೆ ಬಲ ನೀಡಿದೆ ಎಂದು ಕಂಪನಿ ಹೇಳಿದೆ.
ಟ್ರುಜನ್ ಸೋಲಾರ್‌ನ ಈ ಹೂಡಿಕೆ ಕಾರ್ಯಗತಗೊಳಿಸುವ ಸಾಮರ್ಥ್ಯ ಹೆಚ್ಚಿಸಲು, ಕಾರ್ಯಾಚರಣೆಯ ಮೂಲಸೌಕರ್ಯವನ್ನು ಆಳಗೊಳಿಸಲು ಮತ್ತು ಸೌರ ಮೌಲ್ಯ ಸರಪಳಿಯಾದ್ಯಂತ ವಿತರಣೆಯನ್ನು ಬಲಪಡಿಸಲು ಬಳಸಲಾಗುವುದು ಎಂದು ಟ್ರುಜನ್ ಹೇಳಿದೆ.
ಇದನ್ನೂ ಓದಿ: ‘ದೇವರ ಜೊತೆ ಮಾತಾಡಿದ್ದಾರಲ್ಲ, ಕಾದು ನೋಡೋಣ’: ಡಿಕೆಶಿಗೆ ಕುಮಾರಸ್ವಾಮಿ ಟಾಂಗ್!
ಸದ್ಯ ಕಂಪನಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಣೆಯನ್ನು ಹೊಂದಿದೆ. ಉತ್ತರ ಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಕೇರಳದಂತಹ ಮಾರುಕಟ್ಟೆಗೂ ವಿಸ್ತರಿಸಲು ಯೋಜಿಸಿದೆ.
ಪಾಲುದಾರಿಕೆಯ ಕುರಿತು ಮಾತನಾಡಿರುವ ಟ್ರುಜನ್ ಸೋಲಾರ್‌ನ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಾರುಗುಂಡ್ಲ ಭವಾನಿ ಸುರೇಶ್, ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಪಾಲುದಾರಿಕೆ ಹೂಡಿಕೆಗಿಂತ ಹೆಚ್ಚಿನದ್ದು. ನಮ್ಮ ಮೌಲ್ಯಗಳು, ಆಡಳಿತ ಮತ್ತು ದೀರ್ಘಕಾಲೀನ ದೃಷ್ಟಿಕೋನದ ದೃಢೀಕರಣವಾಗಿದೆ. ಸಚಿನ್ ಅವರ ನಂಬಿಕೆಯು ಭವಿಷ್ಯಕ್ಕೆ ಸಿದ್ಧವಾಗಿರುವ ಸೌರ ಉದ್ಯಮ ನಿರ್ಮಿಸುವ ನಮ್ಮ ಬದ್ಧತೆಗೆ ಒಂದು ಬಲ ನೀಡಿದಂತೆ ಎಂದು ಹೇಳಿದ್ದಾರೆ.























