ವಿಡಿಯೋ ಮಾಡುತ್ತಲೇ ನೇಣು ಹಾಕಿಕೊಂಡ ಗೃಹಿಣಿ

0
1

ಬಳ್ಳಾರಿ: ಲೈವ್ ಆತ್ಮಹತ್ಯೆ ವಿಡಿಯೋ ಮಾಡುತ್ತಲೇ ತನಗಾದ ನೋವು ಹೇಳಿಕೊಂಡು ಗೃಹಿಣಿಯೋರ್ವಳು ಆತ್ಯಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯ ಹುಸೇನ್ ನಗರದಲ್ಲಿ ನಡೆದಿದೆ.

ಮುನ್ನಿ ಎನ್ನುವ 23 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ ಮುನ್ನಿ, ಆರು ತಿಂಗಳಿಂದ ಪತಿಯಿಂದ ದೂರವಾಗಿದ್ದರು.

ಈ ನಡುವೆ ಮೊಹಮ್ಮದ್ ಶೇಖ್ ಎನ್ನುವ ಯುವಕನೊಂದಿಗೆ ಸ್ನೇಹ ಮಾಡಿದ್ದು ಇಬ್ಬರ ಮಧ್ಯೆ ವೈಮನಸ್ಸು ಬಂದ ಹಿನ್ನೆಲೆ ಮುನ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಕುರಿತು ಬಳ್ಳಾರಿಯ ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಆರು ತಿಂಗಳ ಸಂಬಳವಿಲ್ಲದೆ ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ! – ಸರ್ಕಾರದ ವಿರುದ್ಧ ವಿಪಕ್ಷ ತೀವ್ರ ವಾಗ್ದಾಳಿ