600 ಬಿಲಿಯನ್‌‌ ಡಾಲರ್ ಸಂಪತ್ತು: ಜಗತ್ತಿಗೆ ಶ್ರೀಮಂತ ಎಲಾನ್ ಮಸ್ಕ್

0
1

ವಾಷಿಂಗ್ಟನ್: ಟೆಸ್ಲಾ, ಸ್ಪೇಸ್‌ಎಕ್ಸ್ ಹಾಗೂ ಎಕ್ಸ್ ಕಂಪನಿಗಳ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ಹೊಸ ದಾಖಲೆ ಬರೆದಿದ್ದಾರೆ. ಸ್ಪೇಸ್‌ಎಕ್ಸ್ ಐಪಿಒ ಬಿಡುಗಡೆ ಮಾಡಿದ ಬೆನ್ನಲ್ಲೇ ಮಸ್ಕ್ ಸಂಪತ್ತಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಸ್ಪೇಸ್‌ಎಕ್ಸ್ ಕಂಪನಿ ಮೌಲ್ಯ 800 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು. ಇದರಲ್ಲಿ ಮಸ್ಕ್ ಶೇ. 42ರಷ್ಟು ಅಂದರೆ 72 ಲಕ್ಷ ಕೋಟಿ ರೂ. ಪಾಲು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಫೋರ್ಬ್ ಬಿಲಿಯೇನರ್ ವರದಿ ಪ್ರಕಾರ, ಎಲಾನ್ ಮಸ್ಕ್ ಸಂಪತ್ತಿನಲ್ಲಿ ಒಂದೇ ದಿನ 168 ಬಿಲಿಯನ್ ಡಾಲರ್(ಸುಮಾರು 15 ಲಕ್ಷ ಕೋಟಿ ರೂ.) ಏರಿಕೆ ಆಗುವ ಮೂಲಕ 638 ಬಿಲಿಯನ್ ಡಾಲರ್‌ಗೆ ತಲುಪಿದೆ. ಆ ಮೂಲಕ ವಿಶ್ವದಲ್ಲೇ 600 ಬಿಲಿಯನ್ ಡಾಲರ್ ಆಸ್ತಿ ಹೊಂದಿದ ಏಕೈಕ ವ್ಯಕ್ತಿ ಎಲಾನ್ ಮಸ್ಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Previous articleIND vs SA:ಹಾರ್ದಿಕ್‌ ಸ್ಫೋಟಕ ಬ್ಯಾಟಿಂಗ್‌, ಭಾರತಕ್ಕೆ ಸರಣಿ ಜಯ