ಬಾಗಲಕೋಟೆ: ಜಾನಪದ ಕಲಾವಿದ, ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಘಟನೆ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ನಡೆದಿದೆ ಎಂದು ಸಂತ್ರಸ್ತ ಬಾಲಕಿ ದೂರಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬಾಗಲಕೋಟೆ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಬೆಂಗಳೂರಿನಲ್ಲಿ ಪಂದ್ಯ ಖಚಿತ
ಈ ಕುರಿತು ಸಂಯುಕ್ತ ಕರ್ನಾಟಕಕ್ಕೆ ಮಾಹಿತಿ ಖಚಿತಪಡಿಸಿದ ಎಸ್ಪಿ ಸಿದ್ದಾರ್ಥ ಗೋಯಲ್ ಅವರು ಬೆಳಗಾವಿ ಜಿಲ್ಲೆಯಲ್ಲಿ ಝಿರೋ ಎಫ್ಐಆರ್ ದಾಖಲಾಗಿದೆ. ಈಗಷ್ಟೇ ನಮಗೆ ವರ್ಗಾವಣೆ ಆಗಿದ್ದು, ಎಫ್ಐಆರ್ ಪರಿಶೀಲಿಸಿ, ತನಿಖೆ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಘಟನೆ ಕುರಿತಾಗಿ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಯಾರು ಈ ಮೈಲಾರಿ..!: ಯೂಟ್ಯೂಬ್ ನಲ್ಲಿ ಖ್ಯಾತಿಗಳಿಸಿರುವ ಮ್ಯೂಸಿಕ್ ಮೈಲಾರಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕುಡಗುಂಡಿ ಮೂಲದವ . ಯೂಟ್ಯೂಬ್ ನಲ್ಲಿ ಭಾರೀ ಹವಾ ಸೃಷ್ಟಿಸಿರುವ ಮೈಲಾರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಬಾಗಲಕೋಟಿ ಬಸ್ ಸ್ಟ್ಯಾಂಡಿನಾಗ ನಿಂತಾಳ ಕಡಬಿಡಕಿ, ಯಾದಿಮ್ಯಾಲೆ ಶಾದಿ, ಕಲತ ಸಾಲಿ ತಲಿಗೆ ಹತ್ತಲಿಲ್ಲ ಸೇರಿ ನೂರಾರು ಹಾಡುಗಳನ್ನು ಮೈಲಾರಿ ಹಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.























