IND vs SA 2nd T20: ಗೆಲುವಿನ ವಿಶ್ವಾಸದಲ್ಲಿ ಟೀಮ್ ಇಂಡಿಯಾ

0
1

ಚಂಡೀಗಢ: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ 101 ರನ್‌ಗಳ ಬೃಹತ್ ಗೆಲುವನ್ನು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಇಂದು 2ನೇ ಟಿ20 ಪಂದ್ಯದಲ್ಲಿ ಮತ್ತೊಂದು ಗೆಲುವನ್ನು ಸಾಧಿಸಲು ಸಜ್ಜಾಗಿದೆ.

ಕೇವಲ 2 ದಿನಗಳಲ್ಲೇ 2ನೇ ಟಿ20 ಪಂದ್ಯ ಆಯೋಜನೆಗೊಂಡಿದ್ದು, ಉಭಯ ತಂಡಗಳಿಗೂ ಅಭ್ಯಾಸ ನಡೆಸಲು ಸೂಕ್ತ ಅವಕಾಶ ಸಿಕ್ಕಿಲ್ಲ. ಅಷ್ಟೇ ಅಲ್ಲದೇ, ಚಂಡೀಗಢ ಸ್ಟೇಡಿಯಂನಲ್ಲಿ ಪಿಚ್ ಬ್ಯಾಟಿಂಗ್‌ಗೆ ನೆರವಾಗಿದ್ದು, ರನ್‌ಮಳೆಯೇ ಹರಿದುಬರುವುದು ಖಚಿತವಾಗಿದೆ. ಆದರೆ, ಇನ್ನೂರರಕ್ಕಿಂತಲೂ ಅಧಿಕ ಮೊತ್ತ ಪೇರಿಸಿದರೂ, ಈ ಪಿಚ್‌ನಲ್ಲಿ ಗೆಲುವು ಕಷ್ಟಕರ. ಹಾಗಾಗಿ, ಈ ಪಂದ್ಯದಲ್ಲಿ ಹೆಚ್ಚು ಮೊದಲು ಬ್ಯಾಟಿಂಗ್ ಮಾಡಿದವರಿಗಿಂತ ಚೇಸಿಂಗ್ ತಂಡವೇ ಹೆಚ್ಚು ಲಾಭ ಕಂಡಿದೆ.

ಮೊದಲ ಟಿ20 ಪಂದ್ಯದ ಸೋಲಿನ ನಂತರ ದಕ್ಷಿಣ ಆಫ್ರಿಕಾ ಇಂದು ಗೆಲ್ಲದೇ ಹೋದರೆ, ಸರಣಿ ಗೆಲುವು ಕಷ್ಟವಾಗಲಿದೆ. ಹಾಗಾಗಿ, ಹರಿಣಗಳ ಪಡೆ ರಣತಂತ್ರದೊಂದಿಗೆ ಕಣಕ್ಕಿಳಿಯಬಹುದು. ಆದರೆ, ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಟೀಮ್ ಇಂಡಿಯಾ ಮಾತ್ರ ಇಂದಿನ ಪಂದ್ಯದಲ್ಲಿ ಗೆಲುವಿಗೂ ಮುನ್ನ ತಂಡದಲ್ಲಿ ಬದಲಾವಣೆಗಳಿಗೆ ಕೈ ಹಾಕುವ ಸಾಧ್ಯತೆಗಳಿವೆ. ಅದರಲ್ಲೂ ಬೌಲರ್‌ಗಳ ವಿಚಾರದಲ್ಲಿ ನಾಯಕ ಸೂರ್ಯ ಹಾಗೂ ಕೋಚ್ ಗಂಭೀರ್ ಹೆಚ್ಚು ತಲೆ ಕೆಡಿಸಿಕೊಳ್ಳಲಿದೆ ಎನ್ನಲಾಗಿದೆ.

ಕಟಕ್ ಪಿಚ್‌ನಲ್ಲಿ ಭಾರತ ತಂಡ ದೊಡ್ಡ ಗೆಲುವನ್ನು ಸಾಧಿಸಿದರೂ, ತಂಡದ ಮೊದಲ ಟಾಪ್ ಐವರು ಬ್ಯಾಟರ್‌ಗಳಿಂದ ಹೇಳಿಕೊಳ್ಳುವಂತಹ ಆಟ ಮೂಡಿ ಬಂದಿಲ್ಲ. ಅದರಲ್ಲೂ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಜೊತೆಗೆ ಸೂರ್ಯಕುಮಾರ್ ಯಾದವ್ ಕೂಡ ವಿಫಲರಾದರು. ಹಾಗಾಗಿ, ಈ ಮೂವರ ಆಟ ತಂಡದ ಫಲಿತಾಂಶವನ್ನು ನಿರ್ಧರಿಸಲಿದೆ.

ಸೂರ್ಯಕುಮಾರ್‌ನದ್ದೇ ಚಿಂತೆ ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್‌ನದ್ದೇ ಚಿಂತೆಯಾಗಿದೆ. ಟಿ20 ವಿಶ್ವಕಪ್‌ಗೆ ಕೇವಲ 2 ತಿಂಗಳಷ್ಟೇ ಬಾಕಿಯಿದೆ. ಇಂತಹ ವೇಳೆಯಲ್ಲಿ ಸ್ವದೇಶಿ ಪಿಚ್‌ಗಳಲ್ಲಿ ಸೂರ್ಯನ ಬ್ಯಾಟ್‌ನಿಂದ ದೊಡ್ಡ ಮೊತ್ತ ಮೂಡಿ ಬರುತ್ತಿಲ್ಲ.

ಪಂದ್ಯಗಳನ್ನು ಗೆದ್ದರೂ, ಸೂರ್ಯಕುಮಾರ್ ಸತತ ವೈಫಲ್ಯ ತಂಡವನ್ನು ಕಾಡುತ್ತಿದೆ. 4ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಹಾಗೂ ನಂತರದ ಸ್ಥಾನಗಳಲ್ಲಿ ಬರುವ ಅಕ್ಷರ್ ಪಟೇಲ್ ಬದಲಿಗೆ ರಿಂಕು ಸಿಂಗ್ ಅವರನ್ನು ಆಡಿಸುವ ಸಾಧ್ಯತೆಗಳಿವೆ. ಇನ್ನುಳಿದಂತೆ ತಂಡಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳು ಕಡಿಮೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ವೈಫಲ್ಯ ಬಹುವಾಗಿ ಕಾಡುತ್ತಿದೆ. ಮೊದಲ ಪಂದ್ಯ ಸೋತ ಬಳಿಕ ಇಂದಿನ ಪಂದ್ಯ ಗೆಲ್ಲಲೇಬೇಕಿದ್ದು, ಸರಣಿ ಸಮಬಲ ಸಾಧಿಸಲು ಎದುರು ನೋಡಲಿದೆ.

Previous articleಕುರಿ ತೊಳೆಯಲು ಹೋಗಿ ಚೆಕ್‌ ಡ್ಯಾಂನಲ್ಲಿ ಮುಳುಗಿ ಯುವಕರ ಸಾವು