ದ್ವೇಷ ಭಾಷಣದ ಕಾನೂನು ವಿರುದ್ಧ ಬಿಜೆಪಿ ಕಾನೂನು ಹೋರಾಟ

0
50

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಇವತ್ತು ದ್ವೇಷ ಭಾಷಣದ ವಿರುದ್ಧ ಕಾನೂನು ತಂದಿರುವುದು ಸಂವಿಧಾನ ವಿರುದ್ಧವಿದೆ. ನಾವು ಇದನ್ನು ಖಂಡಿಸುತ್ತೇವೆ ಅಲ್ಲದೇ ಇದರ ವಿರುದ್ಧ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ಕಾನೂನು. ಈಗಾಗಲೇ ದ್ವೇಷದ ಭಾಷಣ ತಡೆಯಲು ಸಾಕಷ್ಟು ಕಾನೂನುಗಳಿವೆ. ಆ ಕಾನೂನು ಬಳಸಬಹುದು. ಆದರೆ, ಹತ್ತು ವರ್ಷದ ಶಿಕ್ಷೆ ಕಾನೂನು ತಂದು ಸರ್ಕಾರದ ವಿರುದ್ಧ, ಅವರ ಪಕ್ಷದ ವಿರುದ್ಧ ಮಾತನಾಡುವವರಿಗೆ ನಾನ್ ಬೆಲೆಬಲ್ ವಾರೆಂಟ್ ತಂದು ಜೈಲಿಗೆ ಕಳುಹಿಸುವ ಹುನ್ನಾರ ಇದರಲ್ಲಿ ಇದೆ. ಇದು ಪ್ರಜಾಪ್ರಭುತ್ವ ವಿರುದ್ಧ ಎಂದು ಆರೋಪಿಸಿದ್ದಾರೆ.

ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗಿದೆ ಅಂತ ಭಾವನೆ ಬರುತ್ತಿದೆ. ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಎಲ್ಲ ರಂಗದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ದೀನ ದಲಿತರ ಹಣವನ್ನು ಲಪಟಾಯಿಸಿರುವ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅದರ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ, ಅವರ ಧ್ವನಿಯನ್ನು ದಮನ ಮಾಡುವ ದಮನಕಾರಿ ಕಾನೂನು ತಂದಿದ್ದಾರೆ ಎಂದಿದ್ದಾರೆ.

ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ರಾಜಕಾರಣಕ್ಕೆ ಇದು ಕಪ್ಪು ಚುಕ್ಕೆ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಅದರ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಅಲ್ಲದೇ ಇದರ ವಿರುದ್ಧ ಬಿಜೆಪಿ ಕಾನೂನಾತ್ಮಕ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

Previous articleಹೈಡ್ರೋಜನ್ ಕಾರ್ ಯುಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ
Next articleಕ್ರೀಡಾಂಗಣ ಇರುವುದೇ ಆಟವಾಡಲು, ಕಾಮನ್‌ ಸೆನ್ಸ್ ಇಲ್ಲದ ಸರ್ಕಾರ