ಬಾಗಲಕೋಟೆ(ಲೋಕಾಪುರ): ಲೋಕಾಪುರ-ಬಾಗಲಕೋಟೆ ರಸ್ತೆಯ ಭಂಟನೂರ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದ ಲಾರಿ-ಸಿಮೆಂಟ್ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದ ಹಾಲಿ ವಸ್ತಿ ಮಿಣಜಗಿಯ ರೇವಣಸಿದ್ದ ವಿಜಯಕುಮಾರ ಕಡೆಮನಿ (20), ಸುರೇಶ ಶಾಂತಪ್ಪ ಕೊಣ್ಣೂರ (33), ಕೊಪ್ಪಳ ಜಿಲ್ಲೆಯ ಕಣಸಾವಿ ಗ್ರಾಮದ ಮಲ್ಲಿಕಾರ್ಜುನ ಶರಣಪ್ಪ ಗುರಿಕಾರ (22) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಮೇಶ ದುರಗಪ್ಪ ಮಾದರ ಇವರಿಗೆ ಗಂಭೀರ ರೂಪದ ಗಾಯಗಳಾಗಿವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.






















