ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ವೆಂಕಟೇಶ್​ ಪ್ರಸಾದ್ ಆಯ್ಕೆ

1
193

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಭಾರತದ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 7 ರಂದು ನಡೆದ ಚುನಾವಣೆಯಲ್ಲಿ 191 ಮತಗಳ ಅಂತರದಲ್ಲಿ ವೆಂಕಟೇಶ ಪ್ರಸಾದ್‌ ಬಣದ ತಂಡ ಭರ್ಜರಿ ಗೆಲುವು ಸಾಧಿಸಿದೆ. ವೆಂಕಟೇಶ ಪ್ರಸಾದ 749 ಮತಗಳನ್ನು ಪಡೆದರೆ, ಕೆ.ಎನ್. ಶಾಂತ್‌ಕುಮಾರ್ 558 ಮತಗಳನ್ನು ಪಡೆದಿದ್ದಾರೆ.

ಪ್ರಸಾದ್ ಅವರ ಸಮಿತಿಯ ಭಾಗವಾಗಿರುವ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಖಜಾಂಚಿಯಾಗಿ ಮಧುಕರ್‌, ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಆಯ್ಕೆಯಾಗಿದ್ದಾರೆ.

Previous articleವಿಮಾನ ವಿಳಂಬದಿಂದ ಜೀವ ಉಳಿಯಿತು
Next articleಅಪ್ಪಟ ಕನ್ನಡಿಗ – ಅಪ್ರತಿಮ ಬೌಲರ್‌ ವೆಂಕಿ ಈಗ ಅಧ್ಯಕ್ಷ

1 COMMENT

LEAVE A REPLY

Please enter your comment!
Please enter your name here