ಸಾವಿರಾರು ನೇಕಾರರ ಕೈಗಳೀಗ ಖಾಲಿ ಖಾಲಿ!

0
95

ಬಾಗಲಕೋಟೆ(ರಬಕವಿ-ಬನಹಟ್ಟಿ): ರಾಜ್ಯದಲ್ಲಿ ಕಳೆದೊಂದು ದಶಕದಿಂದ ಜವಳಿ ಕ್ಷೇತ್ರದ ಸ್ಥಿತಿ ಹೇಳತೀರದಾಗಿದೆ. 50% ವಿದ್ಯುತ್ ಮಗ್ಗಗಳ ಸಂಖ್ಯೆ ಕುಸಿತ ಕಂಡಿದೆ. ಕೆಲ ನೇಕಾರರು ಅನ್ಯ ಉದ್ಯೋಗದತ್ತ ವಾಲುತ್ತಿದ್ದರೆ, ಇನ್ನುಳಿದವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಜವಳಿ ಕ್ಷೇತ್ರ ಪುನಶ್ಚೇತನಕ್ಕೆ ಸರ್ಕಾರ ದಿವ್ಯ ಔಷಧಿ ಒದಗಿಸಬೇಕಿದೆ. ನೇಕಾರ ಸಮುದಾಯಕ್ಕೆ ಮಗ್ಗಗಳ ಖರೀದಿಗೆ 50% ಸಬ್ಸಿಡಿಯಾದರೆ, ಪ.ಜಾತಿ ಸಮುದಾಯದವರಿಗೆ 90% ಸಬ್ಸಿಡಿಯಲ್ಲಿ ಮಗ್ಗಗಳ ಪೂರೈಕೆ ತಾಂತ್ರಿಕವಾಗಿ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ತಮಗೂ 90% ಸಬ್ಸಿಡಿ ಒದಗಿಸಬೇಕೆಂಬುದು ನೇಕಾರರ ಕೂಗು.

ಖರೀದಿಗಿಲ್ಲ ಬೆಲೆ: ಉತ್ಪಾದನೆಗೊಂಡ ಸೀರೆಗಳಿಗೆ ಸಮರ್ಪಕವಾದ ಮಾರುಕಟ್ಟೆಯಿಲ್ಲದೆ ಸಮಸ್ಯೆ ಎದುರಿಸಲು ಕಾರಣವಾಗಿದೆ. ಕೆಎಚ್‌ಡಿಸಿ ನಿಗಮದಡಿ ವಿದ್ಯಾ ವಿಕಾಸ ಯೋಜನೆಯಂತೆ ವಿದ್ಯುತ್ ಮಗ್ಗಗಳಿಂದ ತಯಾರಾದ ಬಟ್ಟೆಗಳನ್ನು ಸರ್ಕಾರದ ನೌಕರ, ಸಿಬ್ಬಂದಿಗಳಿಗೆ ಪೂರೈಕೆಯ ವ್ಯವಸ್ಥೆಯಾಗಬೇಕು.

ಹೈಟೆಕ್ ಸ್ಪರ್ಶ: ಕೇಂದ್ರ ಸರ್ಕಾರದ ಜವಳಿ ನೀತಿಯನ್ನು ಕಠಿಣವಾಗಿ ಜಾರಿ ತರುವ ಮೂಲಕ ಹೈಟೆಕ್ ಹಾಗೂ ಅಟೋ ಲೂಮ್ಸ್‌ಗಳಂತಹ ಮಗ್ಗಗಳ ಅವಶ್ಯಕತೆಯಿದೆ. ಅಲ್ಲದೆ ಕೇಂದ್ರದ ಜವಳಿ ಉನ್ನತೀಕರಣ ಯೋಜನೆ ಜಾರಿಯಾಗದಿರುವದು ವಿಪರ್ಯಾಸ.

ಉದ್ಯಮಿಗಳಿಗೆ ಅವಕಾಶ: ನೇಕಾರಿಕೆ ಸಮುದಾಯವಿರುವ ಪ್ರದೇಶಗಳಲ್ಲಿ ಗಾರ್ಮೆಂಟ್ಸ್‌ಗಳನ್ನು ಸರ್ಕಾರದಿಂದ ಅಥವಾ ಖಾಸಗಿ ಉದ್ಯಮಿಗಳಿಗೆ ಉತ್ತೇಜನವಾಗುವಲ್ಲಿ ಸರ್ಕಾರ ಕಾರಣವಾಗಬೇಕು.

ಸಾಲ ಪದ್ಧತಿ ಸರಳೀಕರಣವಾಗಲಿ: ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರಕುತ್ತಿರುವ ನೇಕಾರರಿಗೆ ಸಮರ್ಪಕವಾಗಿ ಯೋಜನೆ ಸದ್ಬಳಕೆಯಾಗುತ್ತಿಲ್ಲ. ಖರೀದಿ ಮತ್ತು ಮಾರಾಟದ ಸಮಗ್ರ ಮಾಹಿತಿ ಸಮಸ್ಯೆಯಾಗಿದ್ದು, ಸರಳೀಕರಣ ಅವಶ್ಯವಿದೆ. ಸಹಕಾರಿ ಬ್ಯಾಂಕ್ ಹಾಗು ಸಂಘಗಳಿಂದ ಪಡೆದಿರುವ ಸಾಲವನ್ನು ಶೇ. 14ರಷ್ಟು ಬಡ್ಡಿ ತುಂಬುವದರೊಂದಿಗೆ ಸರ್ಕಾರದ ವಿಳಂಬನೀತಿಯಿಂದ 4-5 ವರ್ಷಗಳ ನಂತರ ಸಬ್ಸಿಡಿ ವಾಪಸ್ ದೊರಕುತ್ತಿದೆ. ಇದರಿಂದ ನೇಕಾರ ಸಾಲದ ಬಡ್ಡಿಗೆ ಕಂಟಕವಾಗಿದೆ. ಇವೆಲ್ಲದರ ಕುರಿತು ಸಮಗ್ರ ಮಾಹಿತಿ ಸಂಗ್ರಹಣೆಯ ಜೊತೆಗೆ ನೇಕಾರರ ಬದುಕು ಸುಗಮವಾಗುವದರ ಮೂಲಕ ಜವಳಿ ಕ್ಷೇತ್ರ ಪುನಶ್ಚೇತನಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ಸಾಲ ಪದ್ಧತಿ ಸರಳೀಕರಣಕ್ಕೆ ಆಗ್ರಹ: ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರಕುತ್ತಿರುವ ನೇಕಾರರಿಗೆ ಸಮರ್ಪಕವಾಗಿ ಯೋಜನೆ ಸದ್ಬಳಕೆಯಾಗುತ್ತಿಲ್ಲ. ಖರೀದಿ ಮತ್ತು ಮಾರಾಟದ ಸಮಗ್ರ ಮಾಹಿತಿ ಸಮಸ್ಯೆಯಾಗಿದ್ದು, ಸರಳೀಕರಣ ಅವಶ್ಯವಿದೆ. ಸಹಕಾರಿ ಬ್ಯಾಂಕ್ ಹಾಗು ಸಂಘಗಳಿಂದ ಪಡೆದಿರುವ ಸಾಲವನ್ನು ಶೇ. 14ರಷ್ಟು ಬಡ್ಡಿ ತುಂಬುವದರೊಂದಿಗೆ ಸರ್ಕಾರದ ವಿಳಂಬನೀತಿಯಿಂದ 4-5 ವರ್ಷಗಳ ನಂತರ ಸಬ್ಸಿಡಿ ವಾಪಸ್ ದೊರಕುತ್ತಿದೆ. ಇದರಿಂದ ನೇಕಾರ ಸಾಲದ ಬಡ್ಡಿಗೆ ಕಂಟಕವಾಗಿದೆ. ಬೆಳಗಾವಿ ಅಧಿವೇಶನದ ಸಮಯದಲ್ಲಿ ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುವ ಸಾಧ್ಯತೆ ಇದೆ.

ಜವಳಿ ಅಭಿವೃದ್ಧಿಗೆ ಆವರ್ತ ನಿಧಿ ಸ್ಥಾಪಿಸಿ: ರಾಜ್ಯ ಬಜೆಟ್‌ನಲ್ಲಿ ಜವಳಿ ಅಭಿವೃದ್ಧಿಗೆ ಆವರ್ತ ನಿಧಿ ಸ್ಥಾಪಿಸುವ ಮೂಲಕ ಜವಳಿ ಪುನಶ್ಚೇತನಕ್ಕೆ ಅವಕಾಶ ನೀಡಬೇಕಿದೆ. 2017ರಿಂದ ಇಲ್ಲಿಯವರೆಗೂ ಸಹಕಾರಿ ಬ್ಯಾಂಕ್ ಹಾಗೂ ಹಲವಾರು ಸಹಕಾರಿ ಸಂಘಗಳಲ್ಲಿ ಶೇ. 1 ಮತ್ತು 3 ಆಕರಣೆಯಲ್ಲಿ ಪಡೆದಿರುವ ಸಾಲದ ಬಡ್ಡಿ ಸಹಾಯ ಹಣವು ಇನ್ನೂ ಸರ್ಕಾರದಿಂದ ಆಯಾ ಸಂಘ, ಬ್ಯಾಂಕ್‌ಗಳಿಗೆ ತಲುಪದ ಕಾರಣ ಸಾಲ ಪಡೆದಿರುವ ನೇಕಾರರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸಲು ಕಾರಣವಾಗಿದೆ.

Previous articleಪ್ರವಾಸಕ್ಕೆ ಹೋಗಿದೆ ತಪ್ಪಾಯ್ತಾ: ಗೋವಾ ನೈಟ್‌ಕ್ಲಬ್ ದುರಂತ: ಸಿಲಿಂಡರ್ ಸ್ಫೋಟಕ್ಕೆ ದುರ್ಮರಣ
Next articleರಾಷ್ಟ್ರಪ್ರಶಸ್ತಿ ವಿಜೇತ ದೇಸಿ ಕಲಾವಿದರನ್ನು ಸನ್ಮಾನಿಸಿದ ನೀತಾ ಅಂಬಾನಿ: ಬಾಲಿವುಡ್ ತಾರಾಬಳಗ ಸಹ ಭಾಗಿ

LEAVE A REPLY

Please enter your comment!
Please enter your name here