ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ನಿಗದಿತ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 349 ರನ್ ಗಳಿಸಿತು. ಆರಂಭದಲ್ಲಿಯೇ ಯಶಸ್ವಿ ಜೈಸ್ವಾಲ್ ಕೇವಲ 18 ರನ್ ಗಳಿಸಿ ಔಟಾದರು. ಬಳಿಕ ರೋಹಿತ್ ಜತೆಯಾದ ಕೊಹ್ಲಿ ಉತ್ತಮ ಅಡಿಪಾಯ ಹಾಕಿದರು.
ಉತ್ತಮ ಜತೆಯಾಟ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 136 ರನ್‌ಗಳ ಅತ್ಯುತ್ತಮ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಕೇವಲ 25 ರನ್‌ಗೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಆಸರೆಯಾಯಿತು. ರೋಹಿತ್ 51 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸೇರಿದಂತೆ 57 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ವಿರಾಟ್ ಆರ್ಭಟ: ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ಅಕ್ಷರಶಃ ರೌದ್ರಾವತಾರ ತಾಳಿದರು. ಕೇವಲ 102 ಎಸೆತಗಳಲ್ಲಿ ತಮ್ಮ 52ನೇ ಏಕದಿನ ಶತಕ ಸಿಡಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಒಂದೇ ಮಾದರಿಯಲ್ಲಿ (ಟೆಸ್ಟ್) ನಿರ್ಮಿಸಿದ್ದ 51 ಶತಕಗಳ ದಾಖಲೆಯನ್ನು ಮುರಿದ ಕೊಹ್ಲಿ, ಒಂದೇ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕಿದ ಬೌಲರ್ಸ್: 350 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಆರಂಭದಲ್ಲಿ ಭಾರತದ ಬೌಲರ್‌ಗಳು ಕಟ್ಟಿಹಾಕಿದರು. 4.4 ಓವರ್‌ಗಳಲ್ಲಿ ಕೇವಲ 11 ರನ್‌ಗಳಿಗೆ ಆಫ್ರಿಕಾ ತನ್ನ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಯಾನ್ ರಿಕೆಲ್ಟನ್ ಮತ್ತು ಕ್ವಿಂಟನ್ ಡಿ ಕಾಕ್ ಖಾತೆ ತೆರಿಯದೇ ಪೆವಿಲಿಯನ್ ಸೇರಿದರು. ಆರನೇ ವಿಕೆಟ್‌ಗೆ ಮಾರ್ಕೊ ಜಾನ್ಸೆನ್(70) ಮತ್ತು ಮ್ಯಾಥ್ಯೂ ಬ್ರೀಟ್ಜ್ಕೆ(72) 97 ರನ್‌ಗಳ ಜತೆಯಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿ ಹೊರನಡೆದರು. ಕಾರ್ಬಿನ್ ಬಾಷ್ (67) ಸ್ಫೋಟಕ ಬ್ಯಾಟಿಂಗ್ ನಡೆಸಿದರೂ ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 49.2 ಓವರ್‌ಗಳಲ್ಲಿ 332 ರನ್‌ಗಳಿಗೆ ಆಲೌಟಾಯಿತು.
























Hey folks, 646jili…it is out there. If you are a player get in and get after it at 646jili.