ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಿಂಪ್ ಅಂತ ಭಾಷೆ ಪ್ರಯೋಗಿಸಿದ್ದು, ಯತ್ನಾಳ್‌ಗೆ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಕಠೋರವಾಗಿ ಗುಡುಗಿದ್ದಾರೆ. ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಪ್ರಸಂಗ ಬರುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ಕೊಟ್ಟಿದ್ದಾರೆ.
ನಿಮ್ಮಂತೆ ನಾನು ಚಿಲ್ಲರೆ ಕೆಲಸ ಮಾಡಲ್ಲ ಎಂದಿದ್ದ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮುರುಗೇಶ್ ನಿರಾಣಿ, ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂದು ನಿರಾಣಿ ಹೇಳಿದ್ದಾರೆ. ನಿಮ್ಮ ಜೊತೆ ಕುಮಾರ್ ಎಂಬ ಡ್ರೈವರ್ ಇದ್ದ. ಆ ಡ್ರೈವರ್ ಯಾಕೆ ಕೊಲೆಯಾದ? ಅವ್ನನ್ನು ಕೊಲೆ ಮಾಡಿದ್ಯಾರು ಎಂಬ ಸತ್ಯವನ್ನ ಹೇಳಿ ಎಂದು ಯತ್ನಾಳ್‌ಗೆ ನಿರಾಣಿ ಸವಾಲ್ ಹಾಕಿದ್ದಾರೆ.